ಬಂಟ್ವಾಳ: ಇಬ್ಬರು ಮಕ್ಕಳೊಂದಿಗೆ ತಾಯಿ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಪುರಷಲಚ್ಚಿಲ್ ನಿವಾಸಿ ಹವಿಲ್ ಬರ್ಪೋಜಾ ಅವರ ಪತ್ನಿ ವಿಲ್ಸಿ ಲೊಬೋ ಮತ್ತು ಇಬ್ಬರು ಮಕ್ಕಳಾದ ಏರಡುವರೆ ವರ್ಷದ ಎಲ್ವಿರಾ ಹಾಗೂ ಎರಡುವರೆ ತಿಂಗಳಿನ ಎಲ್ವಿನಾ ಅವರು ಕಾಣೆಯಾಗಿದ್ದಾರೆ.

ಆಕ್ಬೋಬರ್ 30ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಮಕ್ಕಳೊಂದಿಗೆ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನಗೆ ವಾಪಾಸು ಬರದೆ ಕಾಣೆಯಾಗಿದ್ದಾಳೆ ಎಂದು ಪತಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *