ಮುಂಬಯಿ: ಅ.31: ಅಂಧೇರಿ-ಕುರ್ಲ ರಸ್ತೆಯ ಮರೋಲ್ ಅಲ್ಲಿನ ಮಿತ್ತಲ್ ಇಂಡಸ್ಟ್ರೀಯಲ್ ಎಸ್ಟೇಟ್ ಸನಿಹದ ಟೌನ್ ಸೆಂಟರ್ ನಲ್ಲಿ ನವೀಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಅಂಧೇರಿ ಪೂರ್ವದ ಶಾಖೆಯನ್ನು ಅ.31ರಂದು ಶನಿವಾರ  ಪುನಾರಂಭಿಸಲಾಯಿತು. ಭಾರತ್ ಬ್ಯಾಂಕ್ ಇದರ  ಕಾರ್ಯಾಧ್ಯಕ್ಷ  ಜಯ ಸಿ.ಸುವರ್ಣರು ದೀಪ ಬೆಳಗಿಸಿ ುದ್ಘಾಟಿಸಿದರು  . ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಹರೇ ಕೃಷ್ಣ ಫೌಂಡೇಶನ್ನ ಆಡಳಿತ ವಿಶ್ವಸ್ಥ ಕರುಣಾಕರ್ ಪುತ್ರನ್, ಗ್ರಾಹಕರೂ ಮತ್ತು ಹಿರಿಯ ಉದ್ಯಮಿಗಳಾದ ರವೀಂದ್ರನಾಥ ಭಂಡಾರಿ, ದಿವಾಕರ್ ಸುವರ್ಣ, ಫೆಲಿಕ್ಸ್ ಎ.ಡಿ’ಸೋಜಾ ತಾಕೋಡೆ, ಗೋವಿಂದ ಪೂಜಾರಿ, ರವಿ ಮೆಂಡನ್ ಕುರ್ಕಾಲ್, ಸಿಎ| ಅಶ್ವಜಿತ್ ಹೆಜ್ಮಾಡಿ, ಎಂ.ಎನ್ ಕರ್ಕೇರ, ನಾರಾಯಣ ಸುವರ್ಣ, ವರ್ಗೀಸ್ ಜೋರ್ಜ್ , ಸ್ಥಾನೀಯ ಬಿಲ್ಲವ ರೂವಾರಿಗಳಾದ ಶ್ರೀನಿವಾಸ ಕರ್ಕೇರ, ತೋನ್ಸೆ ಸಂಜೀವ ಪೂಜಾರಿ, ಅಶೋಕ್ ಕರ್ಕೇರ ಅಂಧೇರಿ ಸೇರಿದಂತೆ ಸ್ಥಳೀಯ ಅನೇಕ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು.

Bharata Bank-Andheri-East-A2
Bharata Bank-Andheri-East-21

 

Bharata Bank-Andheri-East-18

 

Bharata Bank-Andheri-East-17

 

Bharata Bank-Andheri-East-12

 

Bharata Bank-Andheri-East-14

 

Bharata Bank-Andheri-East-15

 

Bharata Bank-Andheri-East-16

 

Bharata Bank-Andheri-East-10

 

 

 

Bharata Bank-Andheri-East-8

Bharata Bank-Andheri-East-7

Bharata Bank-Andheri-East-3

Bharata Bank-Andheri-East-4

Bharata Bank-Andheri-East-5

Bharata Bank-Andheri-East-6

Bharata Bank-Andheri-East-2

Bharata Bank-Andheri-East-1
ಉದ್ಯಮಿಗಳಾದ ಸಿ.ಎನ್ ಕಾಮತ್, ರುಕ್ಮಯ ಪೂಜಾರಿ, ಹರೀಶ್ ಜಿ.ಅಮೀನ್, ಎಸ್.ಚೆರಿಯನ್, ರಾಕೇಶ್ ಡಿ.ಪಂಚಾಲ್, ಕರುಣಾಕರ್ ಪುತ್ರನ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಬ್ಯಾಂಕ್ ಹಾಗೂ ಶಾಖೆಗೆ ಶುಭ ಕೋರಿದರು.

ಬ್ಯಾಂಕ್ನ ನಿರ್ದೇದಶಕರುಗಳಾದ ಕೆ.ಎನ್ ಸುವರ್ಣ, ಭಾಸ್ಕರ್ ಎಂ.ಸಾಲ್ಯಾನ್, ನ್ಯಾ| ಎಸ್.ಬಿ ಅವಿೂನ್, ಆರ್.ಡಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ಮೂಲ್ಕಿ, ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಉಪ ಪ್ರಧಾನ ವ್ಯವಸ್ಥಾಪಕರುಗಳಾದ ಸುರೇಶ್ ಎಸ್.ಸಾಲ್ಯಾನ್, ರಘು ಪೂಜಾರಿ, ವಿವೇಕ್ ಎಸ್.ಶ್ಯಾನ್ಭಾಗ್, ಜಗದೀಶ್ ಎನ್, ಮೋಹನ್ದಾಸ್ ಹೆಜ್ಮಾಡಿ, ಪ್ರಭಾಕರ್ ಜಿ.ಸುವರ್ಣ, ದಿನೇಶ್ ಬಿ.ಸಾಲ್ಯಾನ್, ಸುರೇಶ್ ಎಸ್. ಸಾಲ್ಯಾನ್, ವಿದ್ಯಾನಂದ ಎಸ್.ಕರ್ಕೇರಾ, ವಿಶ್ವನಾಥ್ ಜಿ.ಸುವರ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಾಸುದೇವ ಪಿ.ಸಾಲ್ಯಾನ್, ಪ್ರಭಾಕರ್ ಜಿ.ಪೂಜಾರಿ, ರತ್ನಾಕರ್ ಸಾಲ್ಯಾನ್, ಎಲ್ಐಸಿ ಕನ್ಸಲ್ಟೆಂಟ್ ಎಂ.ಎಸ್ ಪೂಜಾರಿ, ಬ್ಯಾಂಕ್ನ ಯೂನಿಯನ್ ಅಧ್ಯಕ್ಷ ರಮೇಶ್ ಟಿ.ಪೂಜಾರಿ ಮತ್ತಿತರ ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಉಳ್ಳೂರು ಧನಂಜಯ ಶಾಂತಿ ಗಣಹೋಮ, ಸತ್ಯನಾರಾಯಣ ಪೂಜೆ ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿ ಅನುಗ್ರಹಿಸಿದರು. ಬ್ಯಾಂಕ್ ಅಧಿಕಾರಿ ಭಾಸ್ಕರ್ ಸುವರ್ಣ ಮತ್ತು ಕುಮಾರಿ ಭಾಸ್ಕರ್ ದಂಪತಿ ಪೂಜೆಗಳ ಸಹಭಾಗಿತ್ವ್ವ ವಹಿಸಿದ್ದರು. ಬ್ಯಾಂಕ್ನ ಮಹಾ ಪ್ರಬಂಧಕ ನಿತ್ಯಾನಂದ ಡಿ.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹೇಶ್ ಬಿ.ಕೋಟ್ಯಾನ್ (ಶಾಖೆಯ ಮುಖ್ಯಸ್ಥ) ಸ್ವಾಗತಿಸಿದರು. ಶಾಖೆಯ ಸಹ ಪ್ರಬಂಧಕ ಅರುಣ್ ಎಸ್.ಸುವರ್ಣ ಧನ್ಯವದಿಸಿದರು.

ಎಲ್ಐಸಿ ಯೋಜನೆಯ 65 ಪಾಲಿಸಿಗಳೊಂದಿಗೆ 64 ಲಕ್ಷ ರೂಪಾಯಿಗಳ ಪ್ರಥಮ ಪ್ರಿಮಿಯಂ ಸಂಗ್ರಹಿಸಿ ಎಲ್ಐಸಿ ಭೀಮಾ ಬ್ರಾಂಚ್ ಗೌರವ ಪುರಸ್ಕಾರಕ್ಕೆ ಪಾತ್ರವಾದ ಶಾಖೆಗೆ ಎಲ್ಐಸಿ ಪ್ರಾದೇಶಿಕ ವ್ಯವಸ್ಥಾಪಕ ಕಪಿಲ್ದೇವ್ ಫಾರ್ಮರ್, ಅಧಿಕಾರಿಗಳಾದ ಕೆ.ಡಿ ಪ್ರಸಾದ್, ಪ್ರದೀಪ್ ಗಿರ್ಧಾರಿ, ಹಾಗೂ ಶ್ರೀಮತಿ ಕೆ.ರೇಡೆಕರ್ ಪ್ರಶಂಸಿಸಿ ಗೌರವ ಪುರಸ್ಕಾರವನ್ನು ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಅವರನ್ನೊಳಗೊಂಡು ಶಾಖೆಯ ಮುಖ್ಯಸ್ಥ ಮಹೇಶ್ ಬಿ.ಕೋಟ್ಯಾನ್ ಅವರಿಗೆ ಪ್ರದಾನಿಸಿ ಶುಭಾರಿಸಿದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *