ಬಂಟ್ವಾಳ, ಅ. 26: ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಪಾಣೆಮಂಗಳೂರು ಇದರ 6ನೇ ಶಾಖೆಯನ್ನು ಬಂಟ್ವಾಳ ಮುಖ್ಯರಸ್ತೆಯಲ್ಲಿರುವ ವಾಸುದೇವ ಟವರ್ಸ್ ನಲ್ಲಿ ಅ. 26ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದುರ್ಬಲ ವರ್ಗದ ಸಮಾಜಕ್ಕೆ ಇಂತಹ ಆರ್ಥಿಕ ಸಂಸ್ಥೆಯು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರಬಲರಾಗುವುದಕ್ಕೆ ಅವಶ್ಯ ಇದೆ. ಇದನ್ನು ಸ್ಥಾಪಿಸಿದವರ ದೂರದ್ರಷ್ಟಿತ್ವದ ಚಿಂತನೆಯಿಂದ ಈ ಬ್ಯಾಂಕ್ ಆಗಿದೆ. ಗಾಣಿಗ ಸಮಾಜದಿಂದ ಮುಂದೊಂದು ದಿನ ಶೈಕ್ಷಣಿಕ ಸಂಸ್ಥೆಯೊಂದನ್ನು ಆರಂಭಿಸಬೇಕು. ಅದಕ್ಕೆ ಸಮಾಜದಿಂದಲೇ ಚಾಲನೆ ನೀಡುವ ಮೂಲಕ ಶೈಕ್ಷಣಿಕ ಶಕ್ತಿಯಾಗಿ ಈ ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದು ಎಂದರು.

ಒಂದು ಸಮಾಜದಲ್ಲಿ ಸಂಖ್ಯಾ ಬಲ ಇಲ್ಲದಿದ್ದರೂ ಅಂತವರಿಗೆ ಅನೇಕ ಸಂದರ್ಭಗಳಲ್ಲಿ ರಾಜಕೀಯ ಅವಕಾಶ ದೊರೆಯದೇ ಹೋಗಿರಬಹುದು. ಅವಕಾಶ ವಂಚಿತರು ಅಸ್ಥಿತ್ವಕ್ಕಾಗಿ ಹೋರಾಡುವುದು ಅನಿವಾರ್ಯ. ಎಲ್ಲರಿಗೂ ಸಮಾನವಾಗಿ ಅವಕಾಶಗಳು ಲಭ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಸುಮಂಗಲಾ ಸಹಕಾರಿ ಸಂಸ್ಥೆಯ ಆರಂಭದಲ್ಲಿಯೂ ನಾನೇ ಉದ್ಘಾಟಿಸಿದ್ದೆ, ನಂತರದ ದಿನಗಳಲ್ಲಿ ಅದರ ಅಭಿವೃದ್ದಿಯ ವಿವಿಧ ಹಂತಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ಇಂದು ಆರನೇ ಶಾಖೆ ಉದ್ಘಾಟನೆ ಸಂದರ್ಭವು ನನಗೆ ಒದಗಿ ಬಂದಿರುವುದು ಸುವಿಯೋಗ ಎಂದರು.
ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದು ಬಂಟ್ವಾಳ ಪೇಟೆಯಲ್ಲಿ ಶುಭಾರಂಭಗೊಂಡಿರುವ ಆರನೇ ಶಾಖೆಯು ಇನ್ನಷ್ಟು ಉತ್ತಮ ವ್ಯವಹಾರ ನಡೆಸಿ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.
ಭದ್ರತಾ ಕೊಠಡಿ ಉದ್ಘಾಟಿಸಿದ ಬಜಗೋಳಿ ಶ್ರೀ ಆದಿಶಕ್ತಿ ಧರ್ಮದೇವಿ ದೇವಸ್ಥಾನದ ಧರ್ಮದರ್ಶಿ ಸುಧಾಕರ ಸಾಲ್ಯಾನ್ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಹರಿಗೆ ಪ್ರಾಮಾಣಿಕ ಮತ್ತು ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಸಂಸ್ಥೆಯು ಬೆಳೆಯಲು ಅನುಕೂಲ ಆಗುವುದು. ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಯುವಜನತೆಗೆ ಉದ್ಯೋಗ ಅವಕಾಶ ಆಗಲಿ ಎಂದರು.
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಿ. ಆನಂದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಾಖೆಯ ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿ ಸಹಕಾರಿ ಸಂಸ್ಥೆಯಲ್ಲಿ ಠೇವಣಿದಾರರಷ್ಟೆ, ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಸಾಲಗಾರರು ಕೂಡಾ ಪ್ರಾಮುಖ್ಯತೆ ಹೊಂದಿರುತ್ತಾರೆ ಎಂದು ವಿವರಿಸಿದರು.
ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್ ಮುಖ್ಯ ಅತಿಥಿಯಾಗಿ ಮಾತನಾಡಿ ಸ್ಥಳೀಯ ಜನತೆಗೆ ಈ ಸಂಸ್ಥೆಯು ಬಂಟ್ವಾಳದಲ್ಲಿ ಶಾಖೆ ತೆರೆಯುವ ಮೂಲಕ ಇನ್ನಷ್ಟು ಹತ್ತಿರವಾಗಿದೆ.ಹಣಕಾಸು ವ್ಯವಹಾರ ಪಾರದರ್ಶಕ ಸೇವೆಯಿಂದ ಠೇವಣಿದಾರರು ಮತ್ತು ಸಾಲಗಾರರಿಗೆ ಅನುಕೂಲ ಆಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯ ಜಗದೀಶ ಕುಂದರ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ, ಜಿಲ್ಲಾ ವಕ್ ಸಮಿತಿ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್ ಸಭೆ ಉದ್ದೇಶಿಸಿ ಶುಭ ಹಾರೈಸಿದರು.
ಸೊಸೈಟಿ ಅಧ್ಯಕ್ಷ ಎಂ. ನಾರಾಯಣ ಸಪಲ್ಯ ಕಡೇಶ್ವಾಲ್ಯ ಸ್ವಾಗತಿಸಿ ಪ್ರಸ್ತಾವನೆ ನೀಡಿ ಕಳೆದ 22 ವರ್ಷಗಳ ಹಿಂದೆ ದಿ| ಬಿ. ಮಂಜುನಾಥ ಸಪಲ್ಯರ ಸ್ಥಾಪಕ ಅಧ್ಯಕ್ಷತೆಯಲ್ಲಿ ಆರಂಭವಾದ ಸೊಸೈಟಿಯು ಇದೀಗ ವಾಷರ್ಿಕ ನೂರು ಕೋಟಿಗೂ ಮಿಕ್ಕಿ ವ್ಯವಹಾರ ಮಾಡುತ್ತಿದ್ದು ಕಳೆದ ಆರ್ಥಿಕ ವರ್ಷದಲ್ಲಿ 77 ಲಕ್ಷಕ್ಕೂ ಅಕ ಲಾಭಗಳಿಸಿದೆ. ಶೇ. 20 ಡಿವಿಡೆಂಡ್ ವಿತರಿಸಿದೆ. ಸಂಸ್ಥೆಯು ಕಲ್ಲಡ್ಕ, ಚೇಳೂರು, ತುಂಬೆ, ಸಜೀಪನಡು ಪ್ರದೇಶದಲ್ಲಿ ಶಾಖೆಯನ್ನು, ಪಾಣೆಮಂಗಳೂರಲ್ಲಿ ಕೇಂದ್ರ ಕಛೇರಿಯನ್ನು ಹೊಂದಿದ್ದು ಇದೀಗ ತನ್ನ ಹೊಸ ಶಾಖೆಯನ್ನು ಸ್ವರ್ಣನಗರಿ ಬಂಟ್ವಾಳದಲ್ಲಿ ಆರಂಭಿಸಲು ಸಂತೋಷ ಪಡುವುದಾಗಿ ಹೇಳಿದರು.
ತಾ.ಪಂ. ಸದಸ್ಯ ಮಾಧವ ಎಸ್. ಮಾವೆ, ನಿರ್ದೇಶಕರಾದ ಲಿಂಗಪ್ಪ ಕರ್ಕೆರ, ದಿನೇಶ್ ಬಂಗೇರ, ಪುರುಷೋತ್ತಮ ಯಸ್., ತಾರನಾಥ, ಅಚ್ಚುತ ವಿ. ಎಸ್. , ಸುನೀತ ಪದ್ಮನಾಭ, ವೀಣಾ ವಿಶ್ವನಾಥ, ಮುಖ್ಯ ಕಾರ್ಯನಿರ್ವಾಹಕ ವಸಂತ ಪಿ. , ಶಾಖಾಕಾರಿ ಮಹಾಬಲ ಉಪಸ್ಥಿತರಿದ್ದರು.
ಸೊಸೈಟಿ ಉಪಾಧ್ಯಕ್ಷ ಜನಾರ್ದನ ಬಿ.ಎಸ್ ವಂದಿಸಿದರು. ಸೊಸೈಟಿ ಮಾಜಿ ನಿದರ್ೇಶಕ ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ರಾಯಿ ಮತ್ತು ನಿರ್ದೇಶಕ ಗಣೇಶ ಪಜೀರು ಕಾರ್ಯಕ್ರಮ ನಿರ್ವಹಿಸಿದರು.
