ಬಂಟ್ವಾಳ: ದಿ| ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸೆಕ್ಯುರಿಟೀ ಅಪ್ತಸಹಾಯಕ ಕರ್ನಾಲ್ ಅಶೋಕ್ ಕಿಣಿ ( ಎಸ್ ಎಂ, ವಿಎಸ್‍ಎಂ) ನಿವೃತ್ತ, ದೂರದ ದೆಹಲಿಯಿಂದ ಬಂದು ಬಂಟ್ವಾಳದ ಮೊಡಂಕಾಪು ಕಾರಣೀಕ ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯಕ್ಕೆ ಭೇಟಿ ನೀಡಿ ಇಲ್ಲಿನ ಕೊಳದ ತೀರ್ಥ ಸ್ನಾನ ನಡೆಸಿ ಪೂಜೆ ಸಲ್ಲಿಸಿದರು.
2510bteph4Aಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರು ಭೂ ಸೈನ್ಯದ ಅತ್ಯುನ್ನತ ಪದವಿಯ ಸಂದರ್ಭ ರಾಷ್ಟ್ರಪತಿಗಳ ಭದ್ರತಾಪಡೆಯಿಂದ ಆಪ್ತ ಸಹಾಯಕರಾಗಿ ನಿಯುಕ್ತಿಯಾಗಿದ್ದರು. ಅಬ್ದುಲ್ ಕಲಾಂ ಅವರು ಧರ್ಮಕಾರ್ಯದ ಮೂಲಕ ಅಧ್ಯಾತ್ಮ ಶಕ್ತಿಗೆ ತನ್ನನ್ನು ಪರಿವರ್ತಿಸಿಕೊಂಡವರು. ಅವರ ಸೂಚನೆಯಂತೆ ರಾಷ್ಟ್ರದ ಅಭ್ಯುದಯಕ್ಕಾಗಿ ಭಾರತದ ಕಾರಣಿಕ ಶಕ್ತಿ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ದೇಶದ ಹಿತಕ್ಕಾಗಿ ಪ್ರಾರ್ಥಿಸಿದ್ದಾಗಿ ನುಡಿದರು.
ಕಾಲಡಿ, ಕೇದಾರ, ಹೃಷಿಕೇಶ ಮೊದಲಾದ ಶಂಕರಾಚಾರ್ಯರ ಮೂಲ ಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದು ಅದೇ ಮಾದರಿಯಲ್ಲಿ ಇಲ್ಲಿನ ಜಲಾಂತರ್ಗತ ನಾಗಸನ್ನಿ„ಯಲ್ಲಿಯೂ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿರುವುದಾಗಿ ವಿವರಿಸಿದರು.
ಕಲಾಂ ಅವರೊಂದಿಗೆ ಸೇವೆ ಸಲ್ಲಿಸಿದ ಸಮಯ ಸಂದರ್ಭ ಒಂದು ಅಭೂತಪೂರ್ವ ಅನುಭವವಾಗಿದೆ. ಮಾಜಿ ರಾಷ್ಟ್ರಪತಿಗಳು ಪ್ರತಿಯೊಂದು ವಿಚಾರದಲ್ಲೂ ಆಧ್ಯಾತ್ಮದ ಸಂದೇಶದಂತೆ ನಡೆಯುತ್ತಿದ್ದರು. ಉಸಿರಿನ ಕೊನೆಯ ತನಕ ದೇಶದ ಸೇವೆ ಮಾಡಿದ್ದರು. ರಾಮೇಶ್ವರದಲ್ಲಿ ಅವರ ದೇಹಾಂತ್ಯ ಕ್ರಿಯೆಗಳ ಬಳಿಕ ನಾಡಿನಲ್ಲಿ ಪರಿವರ್ತನೆಯನ್ನು ಕಾಣಬೇಕು ಎಂಬ ಅವರ ಸದುದ್ದೇಶ ಮತ್ತು ಸಂದೇಶಗಳನ್ನು ಜನತೆಗೆ ಮುಟ್ಟಿಸಲು ಯಾತ್ರೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯದಲ್ಲಿ ಗುರುದತ್ತ ಶೆಣೈ ಅವರು ಪೂಜೆ ನೆರವೇರಿಸಿ ಪ್ರಸಾದ ನೀಡಿ ಅವರನ್ನು ಗೌರವಿಸಿದ್ದರು.

By Suddi9

Leave a Reply

Your email address will not be published. Required fields are marked *