ಬಂಟ್ವಾಳ : ಮುಖ್ಯ ಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ಪುರಸಭೆಯ ¨ಡ್ಡಕಟ್ಟೆ ಬೇಬಿ ಭಂಡಾರಿ ಮನೆ ಕಡೆಹೋಗುವ ರಸ್ತೆ , ದೈವಗುಡ್ಡೆ ಮುಖ್ಯ ರಸ್ತೆಯಿಂದ ಬಾಬು ಪುರುಷ ಮನೆ ಕಡೆ ಹೋಗುವ ರಸ್ತೆ ಮತ್ತು ದೈವಗುಡ್ಡೆ ಮುಖ್ಯ ರಸ್ತೆಯಿಂದ ಕಲ್ಲುರ್ಟಿ ದೈವಸ್ಥಾನದ ವರೆಗೆ 15 ಲಕ್ಷ್ಷ ವೆಚ್ಚದ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ , ಬೂಡಾ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್ , ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮಿನ್, ಬಂ.ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸದಸ್ಯ ಪದ್ಮಶೇಖರ್ ಜೈನ್, ಪುರಸಭಾ ಸದಸ್ಯರಾದ ಜಗ ದೀಶ್ ಕುಂದರ್ , ಮಹಮ್ಮದ್ ನಂದರಬೆಟ್ಟು, ರಾಮಕೃಷ್ಣ ಆಳ್ವ , ಸದಾಶಿವ ಬಂಗೇರಾ, ಪ್ರವೀಣ್ ಬಿ. , ಗಂಗಾಧರ ಮಂಡಾಡಿ, ಪ್ರಭಾ ಸಾಲ್ಯಾನ್ , ಮಹಮ್ಮದ್ ಶರೀಫ್ , ಚಂಚಲಾಕ್ಷಿ, ಸಂಜೀವಿನಿ, ಜೆಸಿಂತಾ, ನಾಮ ನಿರ್ದೇಶಿತ ಸದಸ್ಯ ಲೋಲಾಕ್ಷ ಶೆಟ್ಟಿ , ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ, ಮುಖ್ಯಾಧಿಕಾರಿ ಸುಧಾಕರ ಭಟ್ , ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
