ಬಂಟ್ವಾಳ : ಸುಭಾಷ್ ಯುವಕ ಮಂಡಲ (ರಿ) ಶ್ರೀ ಶಾರದಾ ಪೂಜಾ ಸಮಿತಿ ಸುಭಾಷ್ ನಗರ ಸಜಿಪ ಮೂಡ ಇದರ ಆಶ್ರಯದಲ್ಲಿ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿದ 89ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಸಭಾ ಕಾರ್ಯಕ್ರಮವು ಜರಗಿತು.

ನಿವೃತ್ತ ಪ್ರಭಾರ ಮುಖ್ಯೋಪಾಧ್ಯಾಯಿನಿ ಪಿ.ನಾಗವೇಣಿ ಮತ್ತು ವರ್ಗಾವಣೆಗೊಂಡ ಸಹಶಿಕ್ಷಕಿ ಸುಪ್ರಭಾ ಬ್ರಾಸಿತ್ತಾಯ ರವರನ್ನು ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಸನ್ಮಾನಿಸಿದರು. ಸ್ಥಾಪಕಾಧ್ಯಕ್ಷ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ಸದಾನಂದ ಪೂಂಜ , ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಯಶಂಕರ್ ಬ್ರಾಸಿತ್ತಾಯ , ದೇವಿಪ್ರಸಾದ್ ಪೂಂಜ, ಸುಬ್ರಹ್ಮಣ್ಯ ಭಟ್ , ಯೋಗೀಶ್ ಬೆಳ್ಚಡ , ಚೆನ್ನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
