ಬಂಟ್ವಾಳ: ಟೋಲ್ ಪ್ಲಾಝಾಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ ಸಿಕ್ಕಿಲ್ಲ. ಸೂಕ್ತ ರಕ್ಷಣೆ ಸಿಗುವವರೆಗೆ ಟೋಲ್ ಸಂಗ್ರಹ ಮಾಡುವುದಿಲ್ಲ ಎಂದು ಟೋಲ್ ಗುತ್ತಿಗೆ ಸಂಸ್ಥೆಯ ಹರ್ಷಾ ಮೆಲಾಂಟ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 30 ಮಂದಿ ಕಿಡಿಗೇಡಿಗಳಿದ್ದ ತಂಡ ದಾಂದಲೆ ನಡೆಸಿ 6 ಮಂದಿ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ 10 ಲಕ್ಷ ರುಪಾಯಿ ಮೌಲ್ಯದ ಸೊತ್ತು ನಾಶ ಪಡಿಸಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ಇದ್ದು ಪೊಲೀಸರ ಗಮನಕ್ಕೆ ತಂದಿದ್ದರೂ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ. 4 ತಿಂಗಳಿನಲ್ಲಿ 3 ಬಾರಿ ದುಷ್ಕರ್ಮಿಗ       ಳು ದ ದಾಳಿ ನಡೆದಿದೆ. ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯಗಳ ಸಿಡಿ ಸಹಿತ ಠಾಣೆಗೆ ದೂರು ನೀಡಿದ್ದೇವೆ. ಆದರೆ ಪೊಲೀಸರು ಯಾರ ವಿರುದ್ದವೂ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ರಾಜಾರಾಮ ನಾಯಕ್ ಹಾಜರಿದ್ದರು.

By suddi9

Leave a Reply

Your email address will not be published. Required fields are marked *