ಸುದ್ದಿ 9 ಬಂಟ್ವಾಳ : ಕೇಂದ್ರದಲ್ಲಿ ಕಾಂಗ್ರೇಸ್ ಸಕರ್ಾರ ಅಧಿಕಾರದಲ್ಲಿರುವುದೇ ದುರದೃಷ್ಟಕರ, ಅವರದ್ದು ಒನ್ ಪಾಯಿಂಟ್ ಪ್ರೋಗ್ರಾಂ, ಅವರು ಹುಟ್ಟಿದ್ದೇ ಅಲ್ಪಸಂಖ್ಯಾತರಿಗಾಗಿ , ಅದಕ್ಕಾಗಿ ಅವರ ಹಿಂದೆ ಬಿದ್ದಿದ್ದಾರೆ ಎಂದು ಪುತ್ತೂರಿನ ವೈದ್ಯ ಡಾ.ಪ್ರಸಾದ್ ಭಂಡಾರಿ ಟೀಕಿಸಿದ್ದಾರೆ. ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 6ನೇ ದಿನವಾದ ಸಂಜೆ ಅನಂತಾಡಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕೇಂದ್ರದ ಭ್ರಷ್ಟ ಕಾಂಗ್ರೇಸ್ ಸಕರ್ಾರವನ್ನು ಕಿತ್ತು ಅರಬ್ಬೀಸಮುದ್ರಕ್ಕೆ ಎಸೆಯಬೇಕು, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯಾಗಿಸುವ ನಿಟ್ಟಿನಲ್ಲಿ, ಮತದಾರರು ಕಾರ್ಯಕರ್ತರು ಸಂಕಲ್ಪ ಮಾಡುವಂತೆ ಅವರು ಕರೆ ನೀಡಿದರು. ಸಿದ್ದರಾಮಯ್ಯ ಶುದ್ದ ಹೋಪ್ ಲೆಸ್.. ಅನ್ನಭಾಗ್ಯದ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಪೋಲು ಮಾಡುವ ಬದಲು ಅದನ್ನು ಅಭಿವೃದ್ದಿಗೆ ಉಪಯೋಗಿಸಬಾರದೇ ಎಂದು ಪ್ರಶ್ನಿಸಿದ ಅವರು, ಶುದ್ದ ಹೋಪ್ ಲೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ , ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ನೋಡಿ ಕಲಿತುಕೊಳ್ಳಲಿ ಎಂದರು. ಎನ್ಡಿಎ ಸಕರ್ಾರ ದಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಜಪೇಯಿಯವರ ಸಾಧನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಾವು ವಿಫಲರಾದ್ದರಿಂದ ಅಂದು ಸೋಲು ಅನುಭವಿಸಬೇಕಾಯಿತು, ಆದರೆ ಈ ಬಾರಿ ಅಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕೆಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿಯವರು ಮಾತನಾಡಿ, ಗ್ರಾಮದೆಡೆಗೆ ಬಿಜೆಪಿ ನಡಿಗೆ ಬಿಜೆಪಿ ಆಯೋಜಿಸಿದ ವಿನೂತನ ಕಾರ್ಯಕ್ರಮವಾಗಿದ್ದು, ರಾಜೇಶ್ ನಾಯ್ಕ್ ರವರು ಸೋಲನ್ನು ಸವಾಲಾಗಿ ಸ್ವೀಕರಿಸಿರುವುದಕ್ಕೆ ಇದು ಸಾಕ್ಷಿ, ಕ್ಷೇತ್ರದ ಎಲ್ಲಾ ಮತದಾರರು, ಪಕ್ಷದ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿಯುವಂತೆ ಅವರು ಕರೆ ನೀಡಿದರು.
ವೇದಿಕೆಯಲ್ಲಿ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ”

ಪಾದಯಾತ್ರೆಯ ನೇತಾರ ಉಳಿಪಾಡಿ
ಗುತ್ತು ರಾಜೇಶ್ ನಾಯ್ಕ್, ಪಕ್ಷದ ಪ್ರಮುಖರಾದ ರಾಜೇಶ್ ಶೆಟ್ಟಿ ಪಜೀರು, ಚೆನ್ನಪ್ಪ ಕೋಟ್ಯಾನ್, ಆನಂದ ಶಂಭೂರು, ಕಮಲಾಕ್ಷಿ ಪೂಜಾರಿ, ಶಾಂತಪ್ಪ ಪೂಜಾರಿ, ಸದಾಶಿವ ಬಿ, ತನಿಯಪ್ಪ ಗೌಡ, ಧನಂಜಯ ಗೌಡ, ಉಗ್ಗಪ್ಪ ಶೆಟ್ಟಿ ಕೊಂಬಿಲ, ಪೃಥ್ವಿರಾಜ್, ಅಬ್ದುಲ್ ರಝಾಕ್ , ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಸನತ್ ಕುಮಾರ್ ರೈ ಸ್ವಾಗತಿಸಿದರು. ದಿನೇಶ್ ಅಮ್ಟೂರು ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.

