ಉಳ್ಳಾಲ: ಸಾಹಿತಿ , ಸಾಮಾಜಿಕ ಮುಂದಾಳು ಉಳ್ಳಾಲ ಮೊಗವೀರಪಟ್ಣ ನಿವಾಸಿ ದಿನಕರ ಬಂಗೇರ(75) ಆ. 17ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Ninakar Bangeraಮುಂಬಯಿಯ ಪ್ರತಿಷ್ಠಿತ ಎಲ್. ಎಂಡ್ ಟಿ. ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು, ನಿವೃತ್ತರಾಗಿದ್ದ ಅವರು ನಿವೃತ್ತಿಯ ಬಳಿಕ ಉಳ್ಳಾಲದಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು ಬಂಗೇರ ಮೂಲಸ್ಥಾನದ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಹಿತಿಯಾಗಿ ಇವರು ಉಳ್ಳಾಲ ವೀರರಾಣಿ ಅಬ್ಬಕ್ಕ ದೇವಿಯ ನಿಷ್ಠಾವಂತ ಮೊಗವೀರರು’ ಮತ್ತು ` ಉಳ್ಳಾಲ ಬೊಳಂಗರೆ ಮಣ್ಣು ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನ’ ಕೃತಿಗಳು ಪ್ರಮುಖವಾಗಿದ್ದು, ಸಾಹಿತ್ಯ ಕ್ಷೇತ್ರ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಮಸ್ತ ಮೋಗವೀರರ ಪರವಾಗಿ ಮೊಗವೀರ ಸಂಘ ಉಳ್ಳಾಲ ಸಂತಾಪ ವ್ಯಕ್ತಪಡಿಸಿದೆ.

By suddi9

Leave a Reply

Your email address will not be published. Required fields are marked *