ಬೆಂಗಳೂರು: ಟಿವಿ ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಹೇಳುವ ಮತ್ತು ತನ್ನನ್ನು ನಂಬಿ ಬರುವ ಭಕ್ತರನ್ನು ಜ್ಯೋತಿಷ್ಯಾಲಯಕ್ಕೆ ಆಹ್ವಾನಿಸುತ್ತಿದ್ದ ದೇವಿಶ್ರೀ ಗುರೂಜಿ ರಾಸಲೀಲೆ ಪ್ರಕರಣಗಳು ಬಯಲಾಗಿವೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವನ ಕಚೇರಿಗೆ ಸಮಸ್ಯೆಗಳಿಂದ ನೊಂದು ಪರಿಹಾರಕ್ಕಾಗಿ ಬರುವ ಯುವತಿಯವರ ಜತೆ ಪ್ರಣಯದಾಟದಲ್ಲಿ ತೊಡುಗುವ ದೃಶ್ಯಗಳು ಕಚೇರಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಸಾರದ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಬರುವ ಯುವತಿಯರನ್ನು ಅಪ್ಪಿ ಮುದ್ದಾಡುವ ದೃಶ್ಯಗಳಿವೆ.
ಜ್ಯೋತಿಷ್ಯವನ್ನು ಕೇಳುವುದಕ್ಕೆ ಬರುವ ಜನರಿಗೆ ತಲಾ 3000 ರೂ. ಶುಲ್ಕವನ್ನು ಇವನು ವಸೂಲಿ ಮಾಡುತ್ತಿದ್ದನೆಂದು ಹೇಳಲಾಗಿದೆ. ಟಿವಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ದೇವೀಶ್ರೀ ಪರಾರಿಯಾಗಿದ್ದಾನೆ. ಭಕ್ತರ ನಂಬಿಕೆಗೆ ದ್ರೋಹವಾಗಿರುವುದರಿಂದ ಅವನ ಕಚೇರಿ ಎದುರು ಸಾಕಷ್ಟು ಜನರು ಸೇರಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇಂತಹ ಕಳ್ಳಸ್ವಾಮೀಜಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಬಹುಶಃ ಅವನು ಮತ್ತೊಂದು ನಿವಾಸ ಅನ್ಲಿಕಾ ಅಪಾರ್ಟ್‌ಮೆಂಟ್‌ನಲ್ಲಿ ಅಡಗಿರಬಹುದೆಂದು ಶಂಕಿಸಲಾಗಿದೆ. ಸಂಸಾರದ ಸಮಸ್ಯೆಗೆ ಪರಿಹಾರ ಕೇಳಿದ್ದ ಯುವತಿಯೊಬ್ಬಳಿಗೆ ನೌಕರಿ ಕೊಟ್ಟು ನಂತರ ಅವಳ ಜತೆ ಕಾಮಕೇಳಿಯಲ್ಲಿ ತೊಡಗಿದ್ದ.
ಇದರಿಂದ ಯುವತಿ ಗರ್ಭಿಣಿಯಾದಾಗ ಗರ್ಭಪಾತ ಕೂಡ ಮಾಡಿಸಿದ್ದ. ಈ ಕುರಿತು ಯುವತಿ ಬರೆದ ಪತ್ರ ಟಿವಿವಾಹಿನಿಗೆ ಸಿಕ್ಕಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಬೈ ಮೂಲದ ವ್ಯಕ್ತಿಯೊಬ್ಬ ಇವನಿಗೆ ಮನೆ ಬಾಡಿಗೆ ನೀಡಿದ್ದು, 3 ವರ್ಷದ ಹಿಂದೆ ಬಾಡಿಗೆಗೆ ಪಡೆದಿದ್ದ.

