ಮುಂಬಯಿ: ಅ.17: ಕಾವ್ಯವು ಆನಂದವನ್ನು ನೀಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಆದರೆ ಜಿ.ವಿ. ಅವರಿಗೆ ಕಾವ್ಯ ರಚನೆಯು ಆಯುಷ್ಯವನ್ನು ನೀಡುವುದಂತಹ ಸತ್ಯ.  ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು, ಸಾಧನೆಗಿಂತ ಸಾಧನೆಯ ತುಡಿತ ಇರಬೇಕು. ಇವೆಲ್ಲವನ್ನು ಜೀವಿ ಅವರು ಬೇಂದ್ರೆ ಮತ್ತು ಗೋಕಕಾರಿಂದ ಎಳೆಯ ವಯಸ್ಸಿನಲ್ಲಿ ಕಲಿತಿದ್ದಾರೆ. ಜೀವಿ ಅವರ ರಕ್ತದ ಕಣದಲ್ಲಿ ಬೇಂದ್ರೆ ಮತ್ತು ಗೋಕಕಾರ ಪ್ರಭಾವವಿದೆ ಎಂಬುದನ್ನು ಅವರ ಕೃತಿಗಳಿಂದ ಕಾಣಬಹುದು. 81 ಹರೆಯಕ್ಕೆ ಕಾಲಿಟ್ಟ ಜೀವಿ ಎಂಬ ತರುಣ ಶತಾಯುಷವನ್ನು ಹೊಂದುವಂತಾಗಲಿ ಎಂಬುದು ನನ್ನ ಆಶಯ ಎಂದು ಸರ್ವೊಚ್ಚ ನ್ಯಾಯಲಯದ ನಿವೃತ್ತ ನ್ಯಾಯಧೀಶ ಜಸ್ಟಿಸ್ ಬಿ.ಎನ್ ಶ್ರೀಕೃಷ್ಣ ತಿಳಿಸಿದರು.

Dr. GV Kulakarni Book Release-A3 (1)

Dr. GV Kulakarni Book Release-3

Dr. GV Kulakarni Book Release-11

Dr. GV Kulakarni Book Release-12

Dr. GV Kulakarni Book Release-13

Dr. GV Kulakarni Book Release-20

Dr. GV Kulakarni Book Release-A1

Dr. GV Kulakarni Book Release-A2

ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ನ ಇರ್ಲಾ  ಅಲ್ಲಿನ ಶ್ರೀ ಅದಮಾರು ಮಠದ ಆವಣದಲ್ಲಿ ಪುರೋಗಾಮಿ ಸಾಹಿತ್ಯ ಪ್ರಕಾಶನ ಹುಬ್ಬಳ್ಳಿ, ನಾರಾಯಣಾಮೃತ ಫೌಂಡೇಶನ್ ಮೈಸೂರು, ಹರ್ಷವರ್ಧನ ಪ್ರಕಾಶನ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಡಿನ ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ  ಅವರ ಕೃತಿ ಮಂಗಳ ಲೋಕದ ಅಂಗಳಕೇರಿ (ಬೇಂದ್ರೆ ಕಾವ್ಯದ ಬಗೆಗಿನ 12 ಲೇಖನಗಳ ಸಂಗ್ರಹ ಬಿಡುಗಡೆ ಕಾರ್ಯಕ್ರಮ ಜರುಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸುಪ್ರಿಮ್ ಕೋರ್ಟ್ ನ ನಿವೃತ್ತ ನ್ಯಾಯಧೀಶ ಜಸ್ಟಿಸ್ ಶ್ರೀಕೃಷ್ಣ ಮಾತನಾಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು `ಮಂಗಳ ಲೋಕದ ಅಂಗಳಕೇರಿ’ ಕೃತಿ ಬಿಡುಗಡೆ ಗೊಳಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಕೃತಿ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಸಾಧಕರಾದ ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಉದಯವಾಣಿ ಮುಂಬಯಿ ಆವೃತ್ತಿಯ ಉಪ ಸಂಪಾದಕ ದಿನೇಶ್ ಶೆಟ್ಟಿ ರೆಂಜಾಳ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಗೌ| ಪ್ರ| ಕಾರ್ಯದರ್ಶಿ , ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸೃತ ಏಕೈಕ ಹೊರನಾಡ ಕನ್ನಡಿಗ ರೋನ್ಸ್ ಬಂಟ್ವಾಳ್ ಅವರನ್ನು ಜಸ್ಟಿಸ್ ಶ್ರೀಕೃಷ್ಣರು ಗೌರವಿಸಿ ಪುರಸ್ಕರಿಸಿದರು.

ಡಾ| ಜಿ.ಎನ್ ಉಪಾಧ್ಯ ಕೃತಿಯನ್ನು ಪರಿಚಯಿಸಿ ಬದುಕು ಭವ್ಯತೆಗೆ ಕಾವ್ಯ ಸಾಹಿತ್ಯದ ಅವಶ್ಯಕತೆಯ ಬಗ್ಗೆ ವಿವರಿಸಿ ಸಮರಸವೇ ಜೀವನವನ್ನಾಗಿಸಿದ ಡಾ| ಜೀವಿ ಕುಲಕರ್ಣಿ  ಅವರ ಬದುಕು ಶ್ರೇಷ್ಠತೆ ಹೊಂದಿದೆ. ದ.ರಾ ಬೇಂದ್ರೆ ಅವರಿಗೆ ರಕ್ತದಾನ ಮಾಡಿದ ಜೀವಿಭಾವ ಕೋಶದಲ್ಲಿ ಬೆಸುಗೆಯಾಗಿ ಸಾಹಿತ್ಯ ಸೊಬಗನ್ನು ವಿಶ್ವಕ್ಕೆ ಪರಿಚಯಿಸಿದ ಹಿರಿದ ಜೀವಿಗಳಾಗಿದ್ದಾರೆ. ಬೇಂದ್ರೆ ಜಗತ್ತಿಗೆ ಹೊಸ ಕಿಟಕಿ ಬಾಗಿಲು ತೆರೆಯುವ ಪ್ರಯತ್ನ ಈ ಕೃತಿಯಾಗಿದೆ ಎಂದರು.

ನನ್ನ ಇಂದಿನ ಈ ಕಾರ್ಯಕ್ರಮಕ್ಕೆ ನನ್ನ ಶಿಷ್ಯರ ಬಳಗವು ಆಗಮಿಸಿದ್ದು ತುಂಬಾ ಸಂತೋಷ ತಂದಿದೆ. ಈ ಕಾರ್ಯಕ್ರಮಕ್ಕೆ ಬಂದು ಸಹಕರಿಸಿದ ನಿಮಗೆ ಕೃತಜ್ಞತೆಗಳು. ನನ್ನಲ್ಲಿ ಇನ್ನಷ್ಟು ಬರೆಯುವ ತುಳಿತವಿದೆ. 10 ಮಂದಿ ಶಿಷ್ಯಂದಿರ ಬಗ್ಗೆ ಕೃತಿ ಪ್ರಕಟಿಸುವ ಆಸೆಯನ್ನು ಕೃತಿಕಾರ ಡಾ| ಜೀವಿ ಕುಲಕರ್ಣಿ  ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷೀಯ ನುಡಿಗಳನ್ನಾಡಿ ಒಳನಾಡಿನ ಸಾಹಿತಿಗಳಿಗೆ ಹೊರನಾಡ ಮುಂಬಯಿ ಸಾಹಿತಿಗಳ ಉಪೇಕ್ಷೆ ಪ್ರಶ್ನಾತೀತವಾಗಿ ಕಾಡುತ್ತಿದೆ. ಆದುದರಿಂದ ಹೊರನಾಡ ನಮ್ಮನಡುವಿನ ಸಾಹಿತಿಗಳ ಬಗ್ಗೆ ಮಾತನಾಡುವ ಅಗತ್ಯ ನಮಗಿದೆ. ಡಾ| ಜೀವಿ ಅವರ ಸಾಹಿತಿಕ ಚಿಂತನೆ, ಲೇಖನಗಳು ಪರಿಪೂರ್ಣವಾಗಿದ್ದು, ಅಧ್ಯಾಯನ ಲೋಕದ ಸೇವೆ ಗುರುತರವಾಗಿದೆ. ಇಂತಹ ಮಹಾನುಭವಿ ಜೀವಿ ಶತಾಯುಷವಾಗಿ ಬಾಳಿ ಕನ್ನಡ ಸಾಹಿತ್ಯ ಲೋಕಕ್ಕೆ ಮೆರಗು ನೀಡಲಿ ಎಂದು ಶುಭಾರೈಸಿದರು.

ಈ ಶುಭಾವಸರದಲ್ಲಿ ಹಿರಿಯ ಸಾಹಿತಿ, ಕವಿಗಳಾದ ಬಿ.ಎಸ್ ಕುರ್ಕಾಲ್, ಡಾ| ವಿಶ್ವನಾಥ ಕರ್ನಾಡ್, ಸಿಮಂತೂರು ಚಂದ್ರಹಾಸ ಸುವರ್ಣ, ನ್ಯಾ| ವಸಂತ ಕಲಕೋಟಿ, ನಾಗರಾಜ ಪಡುಕೋಣೆ, ದಿವಾಕರ ಶೆಟ್ಟಿ ಮುದ್ರಾಡಿ, ಚಿತ್ರಕಲಾವಿದ ದೇವದಾಸ್ ಶೆಟ್ಟಿ, ಮುಂಬಯಿ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿಗಳು, ಅನೇಕ ಅಭಿಮಾನಿಗಳು ಹಾಜರಿದ್ದು ಡಾ| ಜೀವಿ ಅವರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಪುರೋಗಾಮಿ ಸಾಹಿತ್ಯ ಪ್ರಕಾಶನದ ಡಾ| ಕೆ.ಎಸ್ ಶರ್ಮಾ  ಸ್ವಾಗತಿಸಿ ಇದು ತ್ರಿವಳಿ ಸಂಗಮದ ಸಂಭ್ರಮವಾಗಿದೆ. ಸಾಹಿತ್ಯಲೋಕದ ಗುರುತರ ಕಾರ್ಯಕ್ರಮವಾಗಿದ್ದು, ಈ ಮೂಲಕ ಸಾರಸ್ವತ ಲೋಕ ಪ್ರಕಾಶಮಾನವಾಗಲಿದೆ ಎಂದರು.

ಕು| ಮೈತ್ರಿಯಾ ಕುಲಕರ್ಣಿ  ಮತ್ತು ಕು| ವಿವೇಕಾ ಪಾಟೀಲ ಪ್ರಾರ್ಥನೆಯನ್ನಾಡಿದರು. ಸುರೇಖಾ ನಾಯ್ಕ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿ ಹರ್ಷವರ್ಧನ ಕುಲಕರ್ಣಿ  ಗೌರವ ಪುರಸ್ಕೃತರನ್ನು ಅಭಿನಂದಿಸಿದರು. ನಾರಾಯಣಾಮೃತ ಫೌಂಡೇಶನ್ನ ಎನ್.ಆರ್ ರಾವ್ ವಂದಿಸಿದರು.

ಚಿತ್ರ  ವರದಿ: ರೊನಿಡಾ ಮುಂಬಯಿ

By suddi9

Leave a Reply

Your email address will not be published. Required fields are marked *