ಬಂಟ್ವಾಳ,ಅ.16:ಮಕ್ಕಳ ಸಾಹಿತಿ ಪಂಜೆಮಂಗೇಶರಾಯ ಭವನಕ್ಕೆ ಬಂಟ್ವಾಳ ತಾಲೂಕು ನಾಡಕಛೇರಿ ಬಳಿಯಲ್ಲಿ ಪ್ರಸ್ತುತ ಅವರ ಸ್ಮಾರಕ ಇರುವ ಸ್ಥಳದಲ್ಲಿ ಸುಮಾರು ಒಂದು ಎಕರೆ ಜಮೀನು ಗುರುತಿಸುವ ಪ್ರಕ್ರಿಯೆ ನಡೆಸಲು ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಅ. 15ರಂದು ಮೆಲ್ಕಾರ್ ಬಿರ್ವ ಸೆಂಟರ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು. ಪಂಜೆ ಭವನಕ್ಕೆಂದು ಈ ಮೊದಲು ಬಿ.ಸಿ.ರೋಡಿನಲ್ಲಿ ಗುರುತಿಸಲಾಗಿದ್ದ ಜಮೀನಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಲಿದೆ ಎಂದು ವಿವರಿಸಿದರು.
ಪಂಜೆ ಸ್ಮಾರಕ ಭವನ ನಿರ್ಮಿಸಲು ಅನೇಕ ಮಂದಿಯಿಂದ ಅಪೇಕ್ಷೆ ವ್ಯಕ್ತವಾಗಿತ್ತು. ಅದಕ್ಕಾಗಿ ಜಮೀನು ಲಭ್ಯತೆಯ ಬಗ್ಗೆ ಪರಿಶೀಲಿಸಿ ಕ್ರ ಕೈಗೊಂಡಿದ್ದು ಅಲ್ಲೊಂದು ಸುಂದರ ಭವನ ನಿರ್ಮಿಸಲಾಗುವುದು ಎಂದು ನುಡಿದರು.
ಬಂಟ್ವಾಳ ಪುರಸಭೆಯ 28 ಕಾಮಗಾರಿಗಳ ಅನುಷ್ಠಾನ ಬಗ್ಗೆ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಬಂಟ್ವಾಳದಲ್ಲಿ ಪಂಜೆ ಶತಮಾನೋತ್ಸವದ ಸ್ಮಾರಕ ಇರುವ ಸ್ಥಳಕ್ಕೆ ತುಂಬಾ ಹತ್ತಿರದಲ್ಲೇ ಒಂದು ಎಕ್ರೆ ಜಮೀನು ಇರುವುದು ಸೌಭಾಗ್ಯವೇ ಸರಿ ಎಂದ ಅವರು, ಪಂಜೆ ಭವನ ನಿರ್ಮಾಣಕ್ಕೆ ಅವಶ್ಯವಿರುವ ಜಮೀನನ್ನು ಕಂದಾಯ ಇಲಾಖೆ ಮೂಲಕ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಂಟ್ವಾಳ ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು , ಕ್ರೀಯಾಯೋಜನೆಯಂತೆ ಆಸ್ಪತ್ರೆಯ ಶವಗಾರ ಹಾಗೂ ಕಿಚನ್ ಕೊಠಡಿಗಳಿಗೆ ಅನುದಾನವಿರಲಿಲ್ಲ , ಹಿನ್ನೆಲೆಯಲ್ಲಿ ಸಿ.ಎಸ್.ಆರ್. ಫಂಡ್ನಲ್ಲಿ 35ಲಕ್ಷ ರೂ ಅನ್ನು ಒದಗಿಸಲಾಗಿದೆ ಎಂದರು. ಪುರಸಭಾ ವ್ಯಾಪ್ತಿಯ 5 ಕಡೆಗಳಲ್ಲಿ ಸುಲಭ ಶೌಚಾಲಯ ನಿರ್ಮಾಣವಾಗಲಿದೆ , ಮೆಲ್ಕಾರ್ ನಿಂದ ಮಾರ್ನಬೈಲು ತಿರುವಿನ ವರೆಗೆ ರಸ್ತೆ ಅಗಲೀಕರಣಕ್ಕೆ 1.60ಕೋಟಿ ಮೀಸಲಿಲಾಗಿದೆ, ನ್ಯಾಷನಲ್ ಪಿಷರಿಸ್ ಬೋರ್ಡ್ ವತಿಯಿಂದ 60ಲಕ್ಷರೂ ವೆಚ್ಚದಲ್ಲಿ ನಿರ್ಮಾ ಣಗೊಂಡಿರುವ ಮೀನುಮಾರುಕಟ್ಟೆ ಶ್ರೀಘ್ರ ಉದ್ಘಾಟನೆಗೊಳ್ಳಲಿದೆ ಎಂದವರು ವಿವರಿಸಿದರು.
ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣದ ನೀಲನಕ್ಷೆ ತಯಾರಿಸಲಾಗಿದ್ದು , ವಿವಿಧ ಹಂತದಲ್ಲಿ ಕಾಮಗಾರಿಗಳು ನಡೆಯಲಿದೆ, ಪುರಸಭಾ ವ್ಯಾಪ್ತಿಯಲ್ಲಿ 2ನೇ ಹಂತದ ಕುಡಿಯುವ ನೀರು ಕಾಮಗಾರಿ ನಡೆಯುತ್ತಿದೆ, ಪಲ್ಲಮಜಲು ಎಂಬಲ್ಲಿ 5ಎಕ್ರೆ ಜಮೀನು ಪುರಸಭೆ ಸ್ವಾನ ಪಡಿಸಿಕೊಂಡಿದ್ದು , ನಿವೇಶನ ರಹಿತರಿಗೆ ನಿವೇಶನ ಹಂಚುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಗುರುವಾರದಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ 28ಕಡೆಗಳಲ್ಲಿ ಶಿಲಾನ್ಯಾಸ , ಪರಿಶೀಲನೆ, ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು 1.40ಕೋಟಿ ರೂ.ವೆಚ್ಚದಲ್ಲಿ ಬಿ.ಕಸ್ಬ ಗ್ರಾಮದ ಲೊರೆಟ್ಟೋ , ಅಗ್ರಾರ್ ಜಕ್ರಿಬೆಟ್ಟು ಚರ್ಚ್ ರಸ್ತೆ ಅಗಲೀಕರಣ ಹಾಗೂ ಡಾಮರೀಕರಣಗೊಳಿಸುವ ಕಾಮಗಾರಿಯೂ ಸೇರಿದೆ ಎಂದ ಅವರು ಅ.21ರಂದು ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅಡುಗೆ ಅನಿಲ ವಿತರಣೆ ಹಾಗೂ ಆಶ್ರಯ ಸಾಲ ಮನ್ನಾದ ತಿಳುವಳಿಕೆ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.
ಪ್ರತಿಕಾ ಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಉಪಾಧ್ಯಕ್ಷೆ ಯಾಸ್ಮೀನ್, ಬಂಟ್ವಾಳ ನಗರ ಯೊಜನಾ ಪ್ರಾಕಾರದ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ ಆಲಿ, ಪುರಸಭಾ ಮುಖ್ಯಾಕಾರಿ ಸುಧಾಕರ್ ಭಟ್ ಹಾಗೂ ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
