ಬಂಟ್ವಾಳ : ಶಂಭೂರು ಗ್ರಾಮದ ಶ್ರೀ ದುರ್ಗ ಪರಮೇಶ್ವರಿ ಮಹಿಳಾ ಮಂಡಳಿ ಇದರ ವಾರ್ಷಿಕ ಮಹಾ ಸಭೆಯು ಅ. 11 ರಂದು ಭಾನುವಾರ ಯುವ ಸಂಗಮ ಯುವಕ ಮಂಡಲದ ಸಮುದಾಯ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗೀತಾ ದೇಜಪ್ಪರವರು ವಹಿಸಿದ್ದರು.
2015 – 16ರ ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿ ಸುನೀತಾ ಪದ್ಮನಾಭ ಶಂಭೂರು ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಗೀತಾ ದೇಜಪ್ಪ , ಉಪಾಧ್ಯಕ್ಷರಾಗಿ ಯಶೋದ ನೋಣಯ್ಯ ರೆಂಜೆಮಾರು, ಕಾರ್ಯದರ್ಶಿಯಾಗಿ ಲೀಲಾವತಿ ನಾಗೇಶ್ ಪೂಜಾರಿ ದಿಂಡಿಕೆರೆ, ಜೊತೆ ಕಾರ್ಯದರ್ಶಿಯಾಗಿ ವಿನೋದ ಆನಂದ ಪೂಜಾರಿ ಶೇಡಿಗುರಿ, ಕೋಶಾಧಿಕಾರಿ ಮೀನಾಕ್ಷಿ ಪೂವಪ್ಪ ನಾಯ್ಕ ನಾಟಿ ಇವರು ಆಯ್ಕೆಯಾಗಿದ್ದಾರೆ.
