ಶಂಭೂರು : ಯುವ ಸಂಗಮ ಯವಕ ಮಂಡಲ ಶೇಡಿಗುರಿ ಇದರ ವಾರ್ಷಿಕ ಮಹಾ ಸಭೆಯು ಅ. 11 ರಂದು ಭಾನುವಾರ ಯುವ ಸಂಗಮ ಯುವಕ ಮಂಡಲದ ಸಮುದಾಯ ಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ಸಚ್ಚಿದಾನಂದ ಶೆಟ್ಟಿ ಬೊಂಡಾಲ ಇವರು ವಹಿಸಿದ್ದರು. 22 ನೆ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೆಕ್ಕ ಪತ್ರವನ್ನು ಸಂಘದ ಕಾರ್ಯದರ್ಶಿ ನಾಗೇಶ್ ಪೂಜಾರಿ ಎಳಬ್ಬೆ ಮಂಡಿಸಿದರು. 2015-16 ನೇ ಸಾಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಕೆ ಕೊಪ್ಪಳಕೋಡಿ ಹಾಗೂ ಸಂಚಾಲಕರಾಗಿ ಯಶೋಧರ ಬಂಗೇರ ಕೊಲ್ಲುರು ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹರೀಶ್ ಸುವರ್ಣ ಶೇಡಿಗುರಿ, ಜೊತೆಕಾರ್ಯದಶರ್ಿಯಾಗಿ ಗಣೇಶ್ ಪೂಜಾರಿ ಬೀಮಗದ್ದೆ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ 25 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಬೆಳ್ಳಿ ಹಬ್ಬ ಆಚರಿಸುವ ಅಂಗವಾಗಿ ಬೆಳ್ಳಿಯ ಪ್ರಭಾವಳಿಯನ್ನು ರಚಿಸುವ ಬಗ್ಗೆ ಸಭೆಯಲ್ಲಿ ಸಮಿತಿಯ ಸಂಚಾಲಕ ಪ್ರಸ್ಯಾಪಿಸಿದರು. ನಾಗೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.
