ಮೂಡುಬಿದರೆ: ಇರುವೈಲು ಬಜರಂಗದಳ ಕಾರ್ಯಕರ್ತರೊಬ್ಬರಿಗೆ ಬೈಕ್ನಲ್ಲಿ ಬಂದ ಮುಸುಧಾರಿಗಳು ಬೆದರಿಕೆಯೊಡ್ಡಿರುವ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬಜರಂಗದಳ ಇರುವೈಲು ಘಟಕದ ಮುಖಂಡ ಸಂತೋಷ್ ಶೆಟ್ಟಿ ಅವರು ಬೆಳಿಗ್ಗೆ ಇರುವೈಲು ಶೇಡಿಗುರಿಯ ತಮ್ಮ ಮನೆಯಿಂದ ಮೂಡುಬಿದರೆ ಕಡೆಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಅಶ್ಲೀಲ ಪದಗಳಿಂದ ಸಂತೋಷ್ ಅವರನ್ನು ನಿಂದಿಸಿ ಜೀವಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
