ಬಂಟ್ವಾಳ : ಬಿ.ಸಿ.ರೋಡಿನ ಪೊಲೀಸ್ಲೇನ್ನಲ್ಲಿರುವ ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಅನ್ನಪೂರ್ಣ ಅನ್ನಛತ್ರವನ್ನು ಉದ್ಘಾಟಿಸಿದ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ರವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಯವರನ್ನು ಸನ್ಮಾನಿಸಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಸದಾಶಿವ ಬಂಗೇರಾ, ಆನಂದ ಕೆ., ವಿಶ್ವನಾಥ ಗಣೇಶ್ ಟಯರ್ಸ್ , ಬಂಟ್ವಾಳ ವೃತ್ತ ನಿರೀಕ್ಷಕ ಕೆ.ಯು.ಬೆಳ್ಳಿಯಪ್ಪ, ನಗಠ ಠಾಣಾ ಎಸೈ ನಂದಕುಮಾರ್, ನಿವೃತ್ತ ಎಎಸೈ ಕೇಪುಗೌಡ, ಕೃಷ್ನಪ್ಪ ಕುಲಾಲ್, ಮಾಧವ ಕುಲಾಲ್, ಜಗನ್ನಾಥ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಪ್ರಕಾಶ್ ಬಿ. ಶೆಟ್ಟಿ ತುಂಬೆ, ಪುರಸಭಾ ಸದಸ್ಯರಾದ ಪ್ರಭಾ ಆರ್. ಸಾಲ್ಯಾನ್, ಲೋಕೇಶ್ ಸುವರ್ಣ, ಅನ್ನಪೂರ್ಣೇಶ್ವರೀ ಮಾತೃ ಸೇವಾ ಸಮಿತಿ ಗೌರವಾಧ್ಯಕ್ಷೆ ಸವಿತಾ ಜಗನ್ನಾಥ ಶೆಟ್ಟಿ , ಅಧ್ಯಕ್ಷೆ ಜಯಶ್ರೀ ಜಯಕುಮಾರ್ ಮತ್ತಿತರರು ಹಾಜರಿದ್ದರು.
