ಬಂಟ್ವಾಳ: ಸ್ನಾನಕ್ಕೆಂದು ನದಿಗೆ ಇಳಿದ ಕಾಲೇಜು ವಿದ್ಯಾರ್ಥಿಯೋರ್ವ ನೀರು ಪಾಲಾದ ಘಟನೆ ಬಿ.ಸಿ.ರೋಡು ಸಮೀಪದ ಕೈಕುಂಜೆಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆದಿದೆ. ಇಲ್ಲಿನ ನಂದಾವರ ಜಿ.ಟಿ.ರಸ್ತೆ ನಿವಾಸಿ ಹಮೀದ್ ಎಂಬವರ ಪುತ್ರ ಅಕ್ಬರ್ (17) ನೀರುಪಾಲಾದ ಯುವಕ. ಬಿ.ಸಿ.ರೋಡಿನ ಕೈಕಂಬ ಆದರ್ಶ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿಯಾಗಿದ್ದ ಅಕ್ಬರ್ ಸೋಮವಾರ ಕಾಲೇಜಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಸಹೋದರ ಸಹಿತ ಸ್ನೇಹಿತರ ಜೊತೆಯಲ್ಲಿ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈತನ ಜೊತೆಯಲ್ಲಿದ್ದ ಇತರರು ಈತನನ್ನು ರಕ್ಷಿಸಲು ಯತ್ನಿಸಿದರಾದರೂ, ಅವರ ಕಣ್ಣೆದುರಲ್ಲೇ ಮುಳುಗಿ ನೀರುಪಾಲಾಗಿದ್ದಾನೆ.
IMG-20151012-WA0009

IMG_20151012_172301
ಮುಂದುವರಿದ ಶೋಧಕಾರ್ಯ.
ಸಂಜೆ 4 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಸ್ಥಳೀಯ ಈಜುಗಾರರ ತಂಡ ಅಕ್ಬರ್ ಗಾಗಿ ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. ನೀರುಪಾಲಾಗಿರುವ ಸುದ್ದಿಹರಡುತ್ತಿದ್ದಂತೆಯೇ ಪಾಣೆಮಂಗಳೂರು, ನಂದಾವರ, ಬಿ.ಸಿರೋಡು, ತಲಪಾಡಿ, ಬಂಟ್ವಾಳ ಸೇರಿದಂತೆ ವಿವಿಧೆಡೆಗಳಿಂದ ಬಂದನೂರಾರು ಸಂಖ್ಯೆಯ ಜನ ನದಿ ಕಿನಾರೆಯಲ್ಲಿ ಜಮಾಯಿಸಿದ್ದರು. ಬಂಟ್ವಾಳ ಅಗ್ನಿಶಾಮಕ ದಳ ಹಾಗೂ ನಗರ ಪೊಲೀಸರು ಸ್ಥಳದಲ್ಲಿದ್ದು, ಶೋಧಕಾರ್ಯಕ್ಕೆ ಸಹಕರಿಸಿದರು. ಪುರಸಭಾ ಸದಸ್ಯರಾದ ಮಹಮ್ಮದ್ ಶರೀಫ್ ಹಾಗೂ ಮೊನಿಶ್ ಆಲಿ ಸ್ಥಳಕ್ಕೆ ಭೇಟಿ ನೀಡಿದರು. ಅಕ್ಬರ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ನಂದಾವರ ನಿವಾಸಿ ಹಮೀದ್ ದಂಪತಿಯ 9 ಮಂದಿ ಮಕ್ಕಳ ಪೈಕಿ 8 ನೆಯವನು. ಮಹಾಲಯ ಅಮವಾಸ್ಯೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಇದ್ದು, ಸ್ನಾನಕ್ಕೆಂದು ನದಿಗೆ ಇಳಿದು ನೀರುಪಾಲಾಗಿದ್ದಾನೆ. ಸಂಜೆಯ ಬಳಿಕವೂ ಪಾಣೆಮಂಗಳೂರಿನ ಈಜುಗಾರರ ತಂಡ ನದಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *