ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಕರ್ನಾಟಕ ಬ್ಯಾಂಕಿನಲ್ಲಿ ಕಳ್ಳರ ತಂಡವೊಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿನ ಶಟರ್‍ನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಕಳವು ನಡೆಸಲು ಪ್ರಯತ್ನ ಪಟ್ಟರು ಪ್ರಯೋಜನವಾಗದೇ ವಾಪಸ್ಸಾಗಿದ್ದಾರೆ. ಬ್ಯಾಂಕಿನ ಸಿಸಿ ಟಿವಿಯಲ್ಲಿ ಮೂರು ಮಂದಿ ಕಳ್ಳರು ಒಳಪ್ರವೇಶಿಸುವ ದೃಶ್ಯ ದಾಖಲುಗೊಂಡಿದ್ದರೂ ಮುಖ ಗುರುತು ಸ್ಪಷ್ಟವಾಗಿ ಕಂಡು ಬಂದಿಲ್ಲ. ಮುಂಜಾನೆ 2 ಗಂಟೆಯಿಂದ ಮೂರು ಗಂಟೆಯ ವೇಳೆಗೆ ಕಳ್ಳರು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ರಸ್ತೆ ಸನಿಹವೇ ಇದ್ದರೂ, ಬ್ಯಾಂಕ್ ಬಳಿ ಹೈಮಾಸ್ಟ್ ದೀಪ್ ಬೆಳಕಿದ್ದರೂ ಕಳ್ಳರು ಬೀಗ ಒಡೆದು ಒಳಪ್ರವೇಶಿಸುವ ಜಾಣ್ಮೆ ತೋರಿದ್ದು ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ಲಾಕರ್ ಯಥಾ ಸ್ಥಿತಿಯಲ್ಲಿದ್ದು,

BTW_OCT12_1
ಬೀಗ ಮುರಿದಿರುವುದು ಹೊರತು ಪಡಿಸಿದರೆ ಬ್ಯಾಂಕ್‍ನಿಂದ ಹಣ ಅಥವಾ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಗಿರೀಶ್ ಮಯ್ಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಸಿಐ ಕೆ.ಯು.ಬೆಳ್ಳಿಯಪ್ಪ, ನಗರ ಠಾಣಾ ಎಸೈ ನಂದ ಕುಮಾರ್, ಕ್ರೈಂ ಎಸೈ ಗಂಗಾಧರಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By Suddi9

Leave a Reply

Your email address will not be published. Required fields are marked *