ಬಂಟ್ವಾಳ : ಮುಂದುವರಿದ ದೇ ಶಗಳಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚಿದೆ . ತಂತ್ರಜ್ಞಾನ ಮುಂದುವರಿದಂತೆ ಕೆಲವು ಅನುಕೂಲಗಳು ಇದ್ದಂತೆ ಅನಾನುಕೂಲತೆ ಗಳಿವೆ. ರೈತರ ಆತ್ಮಹತ್ಯೆಗೆ ಸರಿಯಾದ ಮಾನಸಿಕ ಆರೋಗ್ಯದ ಬಗ್ಗೆ ಅರಿವಿಲ್ಲದೆ ಇರುವುದು ಹಾಗೂ ಅಸಮರ್ಪಕ ಕಾನೂನು ಮಾಹಿತಿಯೇ ಕಾರಣ . ಮಾನವ ಸಮಪನ್ಮೂಲ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುವಂತದ್ದು , ಹಾಗಾಗಿ ಮಾನವ ಸಂಪನ್ಮೂಲ ಸದ್ಭಳಕೆಯಾಗಬೇಕು. ಮಾನಸಿಕ ಆರೋಗ್ಯದಿಂದ ಸದೃಢ ದೇ ಶ ನಿರ್ಮಾಣವಾಗುವತ್ತ ಹೆಜ್ಜೆ ಇಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀ ಶ ಚಂದ್ರಶೇಖರ ಯು. ನುಡಿದರು. ಅವರು ಸಾರ್ವಜನಿಕ ಆಸ್ಪತ್ರೆ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ , ವಕೀಲರ ಸಂಘ , ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
KAR_0422ನ್ಯಾಯಾಧೀ ಶರು , ವಕೀಲರು , ವೈದ್ಯರು ಎಲ್ಲ ವೃತ್ತಿ ಮಾಡುವವರಿಗೂ ಮಾನಸಿಕ ಒತ್ತಡ ಇರುವುದರಿಂದ ಮಾನಸಿಕ ಆರೋಗ್ಯದ ಕಡೆ ಒತ್ತು ಕೊಡಬೇಕು ಎಂದು ನ್ಯಾಯಾಧೀ ಶ ದೇವಾನಂದ ನುಡಿದರು.
ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಪಿ.ಭಾನುಶಂಕರ್ ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕಲ್ಲಡ್ಕ ಬಾಳ್ತಿಲದ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರ ಭಟ್ ವಿಶ್ವ ಮಾನಸಿಕ ಆರೋಗ್ಯ ದಿನದ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಎಂ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವ ಹೆಚ್ಚುವರಿ ಸಿವಿಲ್ ನ್ಯಾಯಾಧೀ ಶ ಆರ್.ಮಹೇಶ್ , ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ತಜ್ಞ ವೈದ್ಯೆ ಡಾ.ರಾಧಿಕಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್ ಪ್ರಸ್ತಾವನೆಗೈದರು. ನ್ಯಾಯವಾದಿ ರ ವೀಂದ್ರ ಕುಕ್ಕಾಜೆ ಸ್ವಾಗತಿಸಿದರು. ಸೋಮಪ್ಪ ಮೂಲ್ಯ ವಂದಿಸಿ, ನ್ಯಾಯವಾದಿ ಆಶಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *