ಬಂಟ್ವಾಳ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಕಾಲ್ನಡಿಗೆ ಜಾಥಾ ಮೂಲಕ ಜನರನ್ನು ಮೂರ್ಖರನ್ನಾಗಿಸಲು ರಾಜಕೀಯ ಮಾಡುತ್ತಿದ್ದಾರೆ ಇದು ನೈಜ ಹೋರಾಟದ ದಿಕ್ಕು ತಪ್ಪಿಸುವ ಯತ್ನ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಶಾಂತ ಕಾಜವ ಆರೋಪಿಸಿದ್ದಾರೆ.

20151009_171401-1
ಬಿ.ಸಿ.ರೋಡ್ನ ಪ್ರೆಸ್ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಡಿ.ವಿ.ಸದಾನಂದ ಗೌಡರು ಸ್ವತಃ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿದಾಗ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರು ಮಾತ್ರ ವಿರೋಧಿಸಿದ್ದರು.
ಪ್ರಸ್ತುತ ಯೋಜನೆಯ ಬಗ್ಗೆ ತಾಕರ್ಿಕ ಅಂತ್ಯ ಮಾಡುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಕಾಂಗ್ರೇಸ್ ಮುಖಂಡರು, ಸಚಿವರು,ಶಾಸಕರೂ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಈ ಯೋಜನೆಯ ವಿರುದ್ದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಹೋರಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಪ್ರಾಮಾಣಿಕ ಹೋರಾಟದಲ್ಲಿ ತೊಡಗಿದ್ದಾರೆ, ಈ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.
ಆದರೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಪಕ್ಷದ ಬಲವರ್ಧನೆಗಾಗಿ ಬ್ಯಾನರ್ ಮತ್ತು ಫ್ಲೆಕ್ಸ್ ರಾಜಕೀಯದ ಮೂಲಕ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಇದರ ಬದಲಾಗಿ ಕೇಂದ್ರ ಪರಿಸರ ಸಚಿವಾಲಯದಿಂದ ಈ ಯೋಜನೆಗೆ ತಡೆಯಾಜ್ಞೆ ತಂದು ಕಾಮಗಾರಿ ನಿಲ್ಲಿಸಲಿ ಎಂದು ಸವಾಲೆಸೆದರು.
ಜಿಲ್ಲಾ ಕಾಂಗ್ರೇಸ್ ಎತ್ತಿನ ಹೊಳೆ ಯೋಜನೆಯ ಪರವಾಗಿದೆ, ಯುವಕಾಂಗ್ರೇಸ್ ವಿರೋಧಿಸಿದೆಯಲ್ಲಾ, ಯಾಕೆ ಈ ಧ್ವಂಧ..? ಎಂಬ ಪತ್ರಕರ್ತರಪ್ರಶ್ನೆಗೆ , ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರುವುದಾಗಿ ಹೇಳಿ ಸ್ಪಷ್ಟ ಉತ್ತರ ನೀಡದೆ ಜಾರಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ಎಪಿಎಂಸಿ ಸದಸ್ಯ ಉಮ್ಮರ್ ಫಜೀರು, ಜಗದೀಶ್ವರ್ ಭಟ್ ಕೊಡಕ್ಕಲ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *