ಬಂಟ್ವಾಳ :ರಾತ್ರಿ ನಿಲ್ಲಿಸಿದ್ದ ಖಾಸಗಿ ಬಸ್ನ ಹಿಂಬದಿಯ ಚಕ್ರಗಳನ್ನು ಕಳ್ಳರು ಕದ್ದೊಯ್ದ ಘಟನೆ ಪುಂಜಾಲಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಇಲ್ಲಿಗೆ ಸಮೀಪದ ಕಟ್ಟೆಮನೆ ಎಂಬಲ್ಲಿ ಮನೆಯ ಹೊರ ಆವರಣದಲ್ಲಿ ರಾತ್ರಿ ಉಜಿರೆಯ ಶಾಲಾಬಸ್ವೊಂದನ್ನು ಪ್ರತಿದಿನ ನಿಲ್ಲಿಸುತ್ತಿದ್ದರು.

ಗುರುವಾರ ನಿಲ್ಲಿಸಲಾಗಿದ್ದ ಬಸ್ನ ಹಿಂಭಾಗದ ಚಕ್ರಗಳನ್ನು ತಡರಾತ್ರಿ ಹೊತ್ತಲ್ಲಿ ಕಳವು ಗೈಯ್ಯಲಾಗಿದೆ.ಕಳ್ಳರು ಬಸ್ನ ಮೇಲ್ಭಾದಲ್ಲಿದ್ದ ಜಾಕ್ ಅನ್ನೇ ಬಳಸಿ ಚಕ್ರ ತೆಗೆದಿದ್ದಾರೆ.ಬಸ್ ಚಾಲಕ ಶಿವಪ್ಪ ಎಂಬವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
