ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಹಳೆಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೀರ್ತಿ ರಾಜ್ ನೀರುಮಾರ್ಗ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷೆ ಲಿಖಿತಾ, ಕಾರ್ಯದರ್ಶಿ ಶ್ರವಣ್ ಕುಮಾರ್, ಜತೆಕಾರ್ಯದರ್ಶಿ ಸುರೇಶ್ ಎಸ್. ನಾವೂರು, ಸಂಚಾಲಕರಾಗಿ ಶಶಿಕಲಾ ಆಯ್ಕೆಯಾಗಿದ್ದಾರೆ. ಪ್ರಾಂಶುಪಾಲ ಗಿರೀಶ್ ಭಟ್ ಅಜೆಕಳರವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು
