ಬಂಟ್ವಾಳ : ಸಣ್ಣ ಮತ್ತು ದೊಡ್ಡ ಟೆಂಪೋ ಚಾಲಕರ-ಮಾಲಕರ ಸಂಘದ ವತಿಯಿಂದ ಖಾಸಗಿ ಜೀಪಿನಲ್ಲಿ , ಆಟೋ ರಿಕ್ಷಾಗಳಲ್ಲಿ ಮತ್ತು ಕಾರುಗಳಲ್ಲಿ ಸರಕುಗಳನ್ನು ಸಾಗಿಸುವುದನ್ನು ನಿಲ್ಲಿಸಬೇಕೆಂದು ಮೆಲ್ಕಾರ್ ಸಂಚಾರಿ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರಯ್ಯ ರವರಿಗೆ ಮನವಿ ಸಲ್ಲಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ರಮಾನಾಥ ಕಾರಂದೂರು , ಉಪಾಧ್ಯಕ್ಷ ನಾರಾಯಣ ಬಂಟ್ವಾಳ , ಕಾರ್ಯದರ್ಶಿ ಹರೀಶ್ ಪೆದಮಳ, ಲೋಕೇಶ್ ಸುವರ್ಣ, ಸುರೇಶ್ ಗೌಡ , ವರದ ಕಾಯರ್ ಮಾರ್ , ಇಸ್ಮಾಯಿಲ್ ಬಿ.ಸಿ.ರೋಡ್ , ನಾರಾಯಣದಾಸ್ ಮತ್ತಿತರರು ಉಪಸ್ಥಿತರಿದ್ದರು.
