ಉಳ್ಳಾಲ: ಫಾದರ್ ಮುಲ್ಲರ್ಸ್ ಹೋಮಿಯೋಪಥಿ ವೈದ್ಯಕೀಯ ಮಹಾವಿಶ್ವವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳ ಜ್ಞಾನವರ್ಧನೆ ಹಾಗೂ ಇತ್ತೀಚಿನ ವೈದ್ಯಕೀಯ ಬೆಳವಣಿಗೆಯ ಕುರಿತಂತೆ ಮಾಹಿತಿಯನ್ನು ಒದಗಿಸುವ ಸಲುವಾಗಿ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ಅ.10 ಮತ್ತು 11 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ವಿನ್ಸೆಂಟ್ ಸಲ್ದಾನ್ಹ ತಿಳಿಸಿದ್ದಾರೆ.
pressmeet (1)
ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಅವರು ಸಮ್ಮೇಳನ ಕುರಿತ ಮಾಹಿತಿ ನೀಡಿದರು.
ಮಹಿಳೆಯರ ಕ್ಯಾನ್ಸರ್ ಇದರ ಸಂಶೋಧನೆ ಹಾಗೂ ಹೋಮಿಯೋಪತಿ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಕುರಿತ ವಿಚಾರಗಳ ಮಂಡನೆಯಲ್ಲಿ ಅನುಭವಿ ಅಲೋಪತಿ ಹಾಗೂ ಹೋಮಿಯೋಪತಿ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಶಾಸಕ ಜೆ.ಆರ್ . ಲೋಬೋ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಫಾದರ್ ಮುಲ್ಲರ್ಸ್ ಸೇವಾ ಸಂಸ್ಥೆಗಳ ನಿರ್ದೇಶಕ ಫಾದರ್ ಪ್ಯಾಟ್ರಿಕ್ ರಾಡ್ರಿಗಸ್ ಭಾಗವಹಿಸಲಿದ್ದಾರೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪ್ರಸಾದ್.ಕೆ, ಉಪಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭುಕಿರಣ್, ಸಮ್ಮೇಳನದ ಸಂಯೋಜಕಿ ಡಾ.ವಿಲ್ಮಾ ಡಿಸೋಜಾ ಹಾಗೂ ಡಾ.ಬ್ಲ್ಯಾನಿ ಲೋಬೊ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *