ಬಂಟ್ವಾಳ: ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನಲ್ಲಿ ಕಳೆದ 1993ರಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದರ ಆರನೇ ಶಾಖೆಯು ಬಂಟ್ವಾಳ ಪೇಟೆ ವಾಸುದೇವ ಟವರ್ಸ್‍ನಲ್ಲಿ ಇದೇ ಅ.26ರಂದು ಬೆಳಿಗ್ಗೆ 10.20 ಗಂಟೆಗೆ ಶುಭಾರಂಭಗೊಳ್ಳಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಶಾಖೆ ಉದ್ಘಾಟಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಭದ್ರತಾ ಕೊಠಡಿ ಉದ್ಘಾಟಿಸುವರು. ಬಜಗೋಳಿ ಆದಿಶಕ್ತಿ ಧರ್ಮದೇವಿ ಕ್ಷೇತ್ರದ ಧರ್ಮದರ್ಶಿ ಸುಧಾಕರ ಸಾಲ್ಯಾನ್ ಪ್ರಥಮ ಠೇವಣಿಪತ್ರ ಬಿಡುಗಡೆಗೊಳಿಸಲಿದ್ದು, ಬಂಟ್ವಾಳ ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಪುರಸಭಾ ಸದಸ್ಯ ಜಗದೀಶ ಕುಂದರ್, ಜಿಲ್ಲಾ ವಕ್ಫ್ ಕಮಿಟಿ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಜಿ.ಮಂಜುನಾಥ ಸಿಂಗ್, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ, ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ, ಬಿ.ಗಿರಿಜಾ ಮಂಜುನಾಥ ಸಪಲ್ಯ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಸೊಸೈಟಿ ಅಧ್ಯಕ್ಷ ಎಂ.ನಾರಾಯಣ ಸಪಲ್ಯ ಕಡೇಶ್ವಾಲ್ಯ ಇವರು ತಿಳಿಸಿದ್ದಾರೆ.
