ಬಂಟ್ವಾಳ:   ಸಂಗಬೆಟ್ಟು ಗ್ರಾ.ಪಂ.ನಲ್ಲಿ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದಡಿ ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಘನತ್ಯಾಜ್ಯ ವಸ್ತುಗಳನ್ನು ಅತಿ ಸರಳ ಮಿತ ವ್ಯಯ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪೈಪ್ ಕಾಂಪೋಸ್ಟನ್ನು ಆರಂಭಿಸಲಾಯಿತು.

Photo Pipe Kampostಈ ಸಂದರ್ಭ ಪ.ಜಾತಿ/ ಪ.ಪಂಗಡ ಕಾಲನಿ, ಬಿ.ಪಿ.ಎಲ್ ಕುಟುಂಬಗಳಿಗೆ, ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ ಶಾಲೆಗಳಲ್ಲಿ ಈ ಘಟಕವನ್ನು ಅಳವಡಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾದ್ಯಕ್ಷ ಸತೀಶ್ ಪೂಜಾರಿ, ಸದಸ್ಯರಾದ ಕೆ.ಮೈಯ್ಯದ್ದಿ, ಸುರೇಶ್.ಕೆ, ಶ್ರೀಧರ ಎಸ್.ಪಿ, ಮಾಧವ ಶೆಟ್ಟಿಗಾರ್, ಉಷಾ, ಶೇಖರ ನಾಯ್ಕ್, ಶಾರದಾ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಿಲ್ವಿಯಾ ಫೆರ್ನಾಂಡಿಸ್ ಹಾಗೂ ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *