ಮುಂಬಯಿ, ಸೆ.12: ನಮ್ಮಲ್ಲಿ ಮತ್ಸರ, ಹೊಟ್ಟೆಕಿಚ್ಚು, ಕೋಪ, ಅಹಂ ಇತ್ಯಾದಿಗಳು ವೃದ್ಧಿಯಾದಗಲೇ ನಾವು ಮೊದಲಾಗಿ ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗುತ್ತೇವೆ. ಅವಾಗ ನೆಮ್ಮದಿ ಕಳಕೊಳ್ಳುವುದು ಪ್ರಕೃತಿ ಸಹಜ. ನಮ್ಮಲ್ಲಿನ ನಕರಾತ್ಮಕ ಚಿಂತನೆಗಳೇ ಅನಾರೋಗ್ಯವನ್ನು ಸೃಷ್ಟಿಸುವುದು. ಸಂತೋಷವಾದರೂ ದೊರೆಯುವುದು ಹೇಗೆ..? ಮನಸ್ಸಿನ ಸ್ವಚ್ಛತೆಯೇ ಮಾನವನ ಸ್ವಸ್ಥತೆ ಆಗಿದೆ. ಆದುದರಿಮ್ದ ಮಾನವ ಮನಸ್ಸುಗಳು ಪರಿಶುದ್ಧವಾಗಿದ್ದಲ್ಲಿ ಆರೋಗ್ಯವು ಕಟ್ಟಿಟ್ಟ ಬುತ್ತಿಯಾಗುವುದುಎಂದು ಮಣಿಪಾಲ ವಿಶ್ವವಿದ್ಯಾಲಯ ನಿವೃತ್ತ ಉಪಕುಲಪತಿ, ಭಾರತ ರಾಷ್ಟ್ರದ ಸರ್ವೊನ್ನತ ಪ್ರತಿಷ್ಠಿತ ಗೌರವ ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆಯಾದ ಪ್ರೊ| ಬಿ.ಎಂ ಹೆಗ್ಡೆ ಕರೆಯಿತ್ತರು.


ಇಂದಿಲ್ಲಿ ಭಾನುವಾರ ಪೂರ್ವಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಮುಕ್ತಾನಂದ ಸಭಾಗೃಹದಲ್ಲಿ ಉದ್ಯಮಶೀಲ ಬಂಟರ ಪ್ರತಿಷ್ಠಿತ ರಾಷ್ಟ್ರಿಯ ಸಂಸ್ಥೆ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಐಬಿಸಿಸಿಐ) ಮತ್ತು ಮುಲುಂಡ್ ಬಂಟ್ಸ್ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯದಾಯಕ ಬದುಕು ವಿಚಾರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ದೇಶಿಸಿ ಬಿ.ಎಂ ಹೆಗ್ಡೆ ಮಾತನಾಡಿ ದರು. ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಕರ್ನೆರೆ ವಿಶ್ವನಾಥ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಕೃತಿ ಸೌಖ್ಯ ಸುಖಬಯಸುವ ಮಾನವನು ಪರರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಿಂದ ತಾನೇ ಮೊದಲಾಗಿ ಅಸ್ವಾಸ್ಥ್ಯ ನಾಗುತ್ತಾನೆ. ನಂತರ ತನ್ನ ದೇಹಸ್ಥಿತಿಯನ್ನು ಕಾಯ್ದಿರಿಸಲು ಉಪಶಮನಕ್ಕಾಗಿ ಇಲ್ಲಸಲ್ಲದ ಉಪಚಾರಗಳನ್ನು ಕಂಡುಕೊಳ್ಳಲು ಹೋಗಿ ಆರೋಗ್ಯವನ್ನೇ ಕಳೆದು ಕೊಳ್ಳುತ್ತಾನೆ. ಇದು ನಮ್ಮ ದೌರ್ಭಾಗ್ಯವಾಗಿದೆ. ನಮ್ಮ ಮನಸ್ಸುಗಳು ಸ್ವಹಿಡಿತದಲ್ಲಿರಿಸಿದರೆ ಆರೋಗ್ಯಕರ ಬದುಕು ತನ್ನಿಂತಾನೇ ಒಲಿಯುತ್ತದೆ. ಆವಾಗಲೇ ನೆಮ್ಮದಿ, ಸಮೃದ್ಧಿಯ ಜೀವನ ಫಲಪ್ರದವಾಗುವುದು. ವಿಜ್ಞಾನದ ನೆಪಒಡ್ಡಿ ಜನತೆಯನ್ನು ಅಜ್ಞಾನದತ್ತ ಒಯ್ಯುವ ಮೆಡಿಸಿನ್ಸ್ ಉದ್ಯಮಗಳು ವ್ಯಾಪಾರೀಕರಣದ ಅಡ್ಡೆಗಳಾಗಿವೆ. ನಿಜವೆಂದರೆ ವೈಜ್ಞಾನಿಕ ಅವಿಷ್ಕಾರದಿಂದ ಮಾನವರು ಅವಿಜ್ಞಾನಿಗಳು ಆಗುತ್ತಿರುವುದು ನಮ್ಮ ದುರಂತವಾಗಿದೆ ಎಂದೂ ಪ್ರೊ| ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಐಬಿಸಿಸಿಐ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಉಪಾಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ), ಜೊತೆ ಕಾರ್ಯದರ್ಶಿ ಗಳಾದ ಕರುಣಾಕರ ಎಂ.ಶೆಟ್ಟಿ ಮತ್ತು ದುರ್ಗಾ ಪ್ರಸಾದ್ ರೈ, ನಿರ್ದೇಶಕರುಗಳಾದ ಸಿಎ| ಶಂಕರ್ ಬಿ.ಶೆಟ್ಟಿ, ಮೋರ್ಲ ರತ್ನಾಕರ್ ಶೆಟ್ಟಿ, ಸಿ.ವಿ ಶೆಟ್ಟಿ, ಮತ್ತು ರಮೇಶ್ ಯು.ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ಹಾಗೂ ಐಬಿಸಿಸಿಐ ಗೌ| ಪ್ರ| ಕಾರ್ಯದರ್ಶಿ ಸುರೇಶ್ ಬಿ.ಶೆಟ್ಟಿ (ಎಸ್.ಬಿ ಶೆಟ್ಟಿ), ಮುಲುಂಡ್ ಬಂಟ್ಸ್ನ ಉಪಾಧ್ಯಕ್ಷ ಹೆಚ್. ಪ್ರಕಾಶ್ಚಂದ್ರ ಶೆಟ್ಟಿ, ಗೌ| ಕೋಶಾಧಿಕಾರಿ ಉದಯ ಎನ್.ಶೆಟ್ಟಿ, ಜೊತೆ ಕಾರ್ಯದರ್ಶಿ ಶಂಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾಕರ್ ವೈ.ಶೆಟ್ಟಿ, ಮಹಿಳಾ ವಿಭಾಗದ ಕಾಯರ್ಾಧ್ಯಕ್ಷೆ ಶ್ರೀಮತಿ ಮಮತಾ ಎಂ.ಶೆಟ್ಟಿ, ಕಾರ್ಯಕ್ರಮ ಸಂಯೋಜನಾ ಕಾರ್ಯಧ್ಯಕ್ಷ ಬಿ.ಶ್ರೀನಿವಾಸ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಐಬಿಸಿಸಿಐ ನಿದರ್ೆಶಕ ಜಯಕೃಷ್ಣ ಎ.ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲತಾ ಜಯರಾಮ ಶೆಟ್ಟಿ, ಕಾರ್ಯದರ್ಶಿ ಕವಿತಾ ಐ.ಆರ್ ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಉಪಾಧ್ಯಕ್ಷ ಎಂ.ಬಿ ವಿಠಲ ರೈ, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಎಸ್.ಶೆಟ್ಟಿ, ಮುಲುಂಡ್ ಬಂಟ್ಸ್ನ ಮಾಜಿ ಅಧ್ಯಕ್ಷ ಡಾ| ಸತ್ಯಪ್ರಕಾಶ್ ಶೆಟ್ಟಿ ಸೇರಿದಂತೆ ಇತರೇ ಪದಾಧಿಕಾರಿಗಳು, ಹಿರಿಯ ಮುಂದಾಳುಗಳಾದ ಎಂ.ಡಿ ಶೆಟ್ಟಿ, ಸುಧಾಕರ್ ಎಸ್.ಹೆಗ್ಡೆ, ಜಯ ಕೆ.ಶೆಟ್ಟಿ, ಗಂಗಾಧರ ಎಸ್.ಪಯ್ಯಡೆ, ಸಿಎ| ರಮೇಶ್ ಎ.ಶೆಟ್ಟಿ ಸೇರಿದಂತೆ ನಗರದ ಅನೇಕ ಬಂಟ ಮುಂದಾಳುಗಳು ಉಪಸ್ಥಿತರಿದ್ದರು.
ಜಯಂತಿ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕಿಕ್ಕಿರಿರು ತುಂಬಿದ ಸಭಾಗೃಹವನ್ನುದ್ದೇಶಿಸಿ ಐಬಿಸಿಸಿಐ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ ಅತಿಥಿಗಳಿಗೆ ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಸಿ.ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಿ.ಶ್ರೀನಿವಾಸ ಶೆಟ್ಟಿ ವಂದಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್









