ಬಜ್ಪೆ: ರಾಷ್ಪ್ರಪಿತ ಮಹತ್ಮಾ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಬಜ್ಪೆಯಲ್ಲಿ ಗ್ರೀನ್ ಸರ್ವಿಸಸ್ ಬಜ್ಪೆ ವತಿಯಿಂದ ಹಲವು ಜನನುರಾಗಿ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ಬಜ್ಪೆ ಸುತ್ತಮುತ್ತಲಿನ ಹಲವು ಶಾಲಾ ಕಾಲೇಜ್‍ಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಶಾಲಾ ಕಾಲೇಜ್‍ನ ಶಿಕ್ಷಕರು ಭಾಗವಹಿಸಿದ್ದರು .

bajpe (1) bajpe (2) bajpe (3) bajpe (4) bajpe (5) bajpe (6) bajpe (7)
ಶಾಲಾ ಕಾಲೇಜ್ ವಿದ್ಯಾರ್ಥಿಗಳಿಂದ ಬೃಹತ್ ಜಾಥಾ ಹಾಗೂ ಹಲವು ವಿಚಾರಗಳ ಮಾಹಿತಿ ಕಾರ್ಯಕ್ರಮ ಹಾಗೂ ಶ್ರಮಾದಾನ ಕಾರ್ಯಕ್ರಮ ನಡೆಯಿತು. ಸ್ವಚ್ಛ ಭಾರತ ಪರಿಕಲ್ಪನೆಯ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತಲ್ಲದೆ ವಿದ್ಯಾರ್ಥಿಗಳಿಂದ ಸ್ವಚ್ಛ ಪರಿಸರದ ಬಗ್ಗೆ ಮಾಹಿತಿ ಕಾರ್ಯಕ್ರಮ ಜರುಗಿದವು. ಸ್ವಚ್ಛ ಹಾಗೂ ಹಸಿರಿನಿಂದ ಕೂಡಿದ ಪರಿಸರ ನಿರ್ಮಿಸುವುದಕ್ಕೆ ನಮ್ಮ ಕೈಜೋಡಿಸೋಣ ಎಂಬ ಪರಿಕಲ್ಪನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಜ್ಪೆಯ ಕೇಂದ್ರ ಮೈದಾನದಿಂದ ಪೊರ್ಕೋಡಿಯವರೆಗೆ ಮೆರವಣಿಗೆ ನಡೆಸಿ ಬಳಿಕ ಬಜ್ಪೆಯ ಕೇಂದ್ರ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಲಾಯಿತು. ಈ ವೇಳೆ ಮಕ್ಕಳಿಗೆ ಸ್ವಚ್ಛ ಪರಿಸರ, ಹಸಿರಿನಿಂದ ಕೂಡಿದ ಪರಿಸರ ಹಾಗೂ ಮದ್ಯಪಾನ ,ಉಕ್ತ ಸಮಾಜನಿರ್ಮಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಹಲವಾರು ಸಂಘಸಂಸ್ಥೆಗಳು ಕೈಜೋಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸಲಾಯಿತಲ್ಲದೆ, ಹಸಿರಿನ ಅನಿವಾರ್ಯತೆಯ ಬಗ್ಗೆ ತಿಳಿಹೇಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ್ನು ಈ ವೇಳೆ ಹಸಿರು ಶಾಲು ಹೊದಿ ಮಹತ್ಮಾ ಗಾಂಧೀಜಿಯ ಭಾವಚಿತ್ರ ನೀಡಿ ಸನ್ಮಾನಿಸಲಯಿತು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *