ಮುಂಬಯಿ: ಇಂದು ತುಳುವಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮೀರಾಭಯಂದರ್ಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಡೆಯುವಷ್ಟು ನಮ್ಮವರ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಬೇರೆಲ್ಲೂ ನಡೆಯಲಿಕ್ಕಿಲ್ಲ. ಹಾಗಿದ್ದೂ ನಮ್ಮಲ್ಲಿ ಎಲ್ಲೆಡೆ ಜನಸೇರುತ್ತಾರೆ.ಇಂದು ಆದಿತ್ಯವಾ ರ. ಅದೂ ಬೆಳಿಗ್ಗೆ, ಅದರಲ್ಲೂ ಅನಂತ ಚತುರ್ತಿಯ ದಿನ, ಇಲ್ಲಿ 73 ಸದಸ್ಯರು ಸೇರಿದ್ದಾರೆ ಎಂದರೆ ಅಭಿಮಾನವಾಗುತ್ತಿದೆ ಎಂದು ತುಳು ಕನ್ನಡವೆಲ್ಪೆರ್ ಅಸೋಸಿಯೇಶನಿನ ಅಧ್ಯಕ್ಷ ಎ.ಕೆ. ಹರೀಶ್ ಹೇಳಿದರು. ಅವರು ಅಸೋಸಿಯೇಶನಿನ ಮೊದಲ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ನಮ್ಮ ಸಂಘ ಮಹಾರಾಷ್ಟ್ರದಲ್ಲಿ ಕೇವಲ ತುಳು-ಕನ್ನಡಕಷ್ಟೇ ಸೀಮಿತವಾಗಬಾರದು. ಇಲ್ಲಿ ಬಹುಭಾಷಾ ಸಾಂಸ್ಕೃತಿಕ ಆದಾನಪ್ರದಾನತೆಗೆ ಮಗದೊಂದು ವೇದಿಕೆ ನಿರ್ಮಾಣವಾಗುತ್ತಿದೆ. ಅದು ಚೈತನ್ಯಯುತವಾಗಿ ಕೆಲಸ ಮಾಡಬೇಕು. ಸಂಘಕ್ಕೆ ಒಂದು ಸಂವಿಧಾನಬೇಕು. ಅದರ ಕರಡು ಈಗ ಸಿದ್ಧವಾಗುತ್ತಿದೆ. ಅದರಲ್ಲಿ ಸಂಘದ ಸದಸ್ಯ ಸಂಪತ್ತಿನ ಕುರಿತು ಅಲೋಚಿಸಲಾಗಿದೆ. ಈಗಾಗಲೇ ಪ್ರಾಯೋಗಿಕ ಹಂತದಲ್ಲಿ ಕಲೆಗೆ `ಕಲರವ’, ವಿಧ್ಯೆಗೆ `ಅರಿವು’, ಸ್ತ್ರೀಶಕ್ತಿಗೆ `ಒಲುಮೆ’ ಮತ್ತು ಯುವಶಕ್ತಿಗೆ `ಚಿಗುರು’ ಮಂಟಪಗಳ ರಚನೆ ಆಗಿದೆ. ಶೀಘ್ರದಲ್ಲೇ ಬಹುಭಾಷಾ ಅದಾನಪ್ರದಾನತೆಗೆ `ಕೊರಲು’ ಎಂಬ ಮಂಟಪ ರೂಪುಗೊಳ್ಳಲಿದೆ. ಇದಕ್ಕೆತಮ್ಮೆಲ್ಲರಸಹಾಕಾರ ಇರಲಿ ಎಂದರು.
ಅಸೋಸಿಯೇಶನಿನ ಗೌ| ಪ್ರ| ಕಾರ್ಯದರ್ಶಿ ಲೀಲಾ ಗಣೇಶ್ ಕಾರ್ಕಾಳ ಗತವರ್ಷದ ವರದಿಯನ್ನು ಸಭೆಯ ಮುಂದಿಟ್ಟರು. ಗೌ| ಕೋಶಾಧಿಕಾರಿ ಹೇಮ ಪ್ರಕಾಶ್ ಅಮೀನ್ ಲೆಕ್ಕ ಪತ್ರದ ಪಟ್ಟಿಯನ್ನು ಸಭೆಯಲ್ಲಿ ಪ್ರಸ್ತುತ ಪಡಿಸಿದರು. ಇದನ್ನು ಸಭೆ ಅಂಗೀಕರಿಸಿತು. ಅಸೋಸಿಯೇಶನಿನ ಹಿರಿಯ ಸಲಹೆಗಾರ್ತಿ ಶಕುಂತಲಾ ಆರ್. ಪ್ರಭು ಮುಂದಿನ ಕಾರ್ಯಕ್ರಮದ ರೂಪರೇಶೆಯನ್ನು ಮತ್ತು ಅದರ ಯೋಜನೆಗಳನ್ನು ವಿವರವಾಗಿ ಸಭೆಯಲ್ಲಿ ಮಂಡಿಸಿದರು. ಅವರು ಉತ್ತರಮುಂಬಯಿಯ ತುದಿಯಲ್ಲಿ, ಠಾಣೆ ಜಿಲ್ಲೆಯ ದಕ್ಷಿಣದ ತುದಿಯಲ್ಲಿ ಕಳೆದ ವರ್ಷ ಚಿಗುರಿದ ಈ ಸಂಸ್ಥೆ ಕರ್ನಾಟಕದ ಭಾಷೆಗಳ ಮತ್ತು ಮಹಾರಾಷ್ಟ್ರದ ಭಾಷೆಗಳ ಬಲವರ್ಧನೆ ಮತ್ತು ಆದಾನ ಪ್ರದಾನದ ಜೊತೆಗೆ;ಭಾರತೀಯ ಹಾಗೂ ವಿಶ್ವಭಾಷೆಗಳ ಅಂತಕರಣವನ್ನು ಮೈಗೂಡಿಸಿಕೊಂಡು ಮಾನವೀಯತೆಯನ್ನು ಸಂಪನ್ನಗೊಳಿಸುವ ವೇದಿಕೆಯಾಗ ಬೇಕೆಂದರು.
ಸಭಿಕರ ಭಾಷಣದಲ್ಲಿ ಅರುಣ್ ಶೆಟ್ಟಿ, ಎರ್ಮಲ್ ಬಾಲಚಂದ್ರ ರೈ ಮತ್ತು ರವಿ ರಾ.ಅಂಚನ್ ಅಸೋಸಿಯೇಶನ ಮತ್ತು ಅದರ ಪಾದರಸದಂತಿರುವ ಅಧ್ಯಕ್ಷ ಎ.ಕೆ. ಹರೀಶ್ ಹಾಗೂ ಎಲ್ಲಾ ಸದಸ್ಯರನ್ನು ಅಭಿನಂದಿಸಿದರಲ್ಲದೆ ಒಗ್ಗಟ್ಟು, ಶಿಸ್ತು, ವಿವೇಕ, ಅನುಕಂಪಗಳಿಗೆ ಇಲ್ಲಿ ಬಲಬರಲಿ ಎಂದು ಹಾರೈಸಿದರು. ಗೌ| ಜೊತೆ ಕಾರ್ಯದರ್ಶಿ ಆಶಾಲತ ಪಿ.ಶೆಟ್ಟಿ ವಂದಿಸಿದರು.
