ಮೂಡುಬಿದರೆ: ಕಡಂದಲೆಯಲ್ಲಿ ಬಾನುವಾರ ನಡೆದ ಸುನ್ನಿಗಳ ಪ್ರಾರ್ಥನಾಲಯ ಧ್ವಂಸ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಪೋಲಿಸರು ಕ್ರಮ ಕೈಗೊಳ್ಳದೆ, ನಿರ್ಲಕ್ಷ ವಹಿಸಿದ್ದಾರೆ. ನಮ್ಮ ಪ್ರಾರ್ಥಾನಾಲಯವನ್ನು ಕೆಡವಿದ ಸಲಾಫಿಗಳು ಪ್ರಾಚೀನಾ ಲಕ್ಷಗಟ್ಟಲೆ ಬೆಲೆ ಬಾಳುವ ಪೆಟ್ಟಿಗೆಯನ್ನು ಅಪಹರಿಸಿದ್ದು, ನ್ಯಾಯ ಸಿಗುವವರೆಗೂ ಸಲಾಫಿಗಳ ಮಸೀದಿಯಲ್ಲಿ ನಮಾಝ್‍ಗೆ ಅವಕಾಶ ಕೊಡುವುದಿಲ್ಲ ಎಂದು ಸುನ್ನಿ ಮಹಿಳೆಯರು ಮಸೀದಿಗೆ ಮುತ್ತಿಗೆ ಹಾಕಿದ ಮಂಗಳವಾರ ಘಟನೆ ನಡೆದಿದೆ.
ಮುಸ್ಲಿಂ ಸಮುದಾಯದ ಸುನ್ನಿ (ತುರ್ಕಿ) ಪಂಗಡದವರು ಶತಮಾನಗಳಿಂದ ಆರಾಧಿಸಿಕೊಂಡು ಬಂದಿದ್ದ ಅಸಿರ್ ಖಾನ್ ಪ್ರಾರ್ಥನಾಲಯವನ್ನು ಸಲಾಪಿಗಳು ಧ್ವಂಸ ಗೊಳಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪೆಟ್ಟಿಗೆಯೊಂದನ್ನು ಅಪಹರಿಸಿ ಆಕ್ರೋಶತಗೊಂಡ ಸುನ್ನಿ ಮಹಿಳೆಯರು ಅಸಿರ್ ಖಾನ್ ಮಂದಿರದ ಪಕ್ಕದಲ್ಲೇ ಇದ್ದ ಮಸೀದಿಗೆ ಮಂಗಳವಾರ ಮುತ್ತಿಗೆ ಹಾಕಿ ನ್ಯಾಯ ಸಿಗುವರೆಗೂ ನಮಾಝ್‍ಗೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಸಲಾಫಿಗಳ ಧರ್ಮ ಗುರು ಮಾತ್ರ ಮಸೀದಿಗೆ ಆಗಮಿಸಿದ್ದು, ಬೀಗ ತೆಗೆಯಲು ಅವಕಾಶ ನೀಡಲಿಲ್ಲ.
mbd_sep29_5ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುನ್ನಿ ಪಂಗಡದ ಮಹಿಳೆಯರು ಕಣ್ಣೀರು ಹರಿಸಿದ್ದು, ನಮ್ಮ ಪೂರ್ವಿಕರ ಕಾಲದಿಂದಲೂ ಇಲ್ಲಿ ಆರಾಧನೆ ನಡೆದುಕೊಂಡು ಬಂದಿದೆ. ನಾವೇ ಸಲಾಫಿಗಳಿಗೆ ಜಾಗ ನೀಡಿ ಮಸೀದಿ ನಿರ್ಮಿಸಲು ಅವಕಾಶ ನೀಡಿದ್ದೇವೆ, ಇಂದು ಅವರೇ ನಮ್ಮ ಅಸಿರ್ ಖಾನ್ ಮಂದಿರ ದ್ವಂಸಗೊಳಿಸಿದ್ದಾರೆ. ಈ ಕೂಡಲೇ ಪೋಲಿಸರು ಆರೋಪಿಗಳನ್ನು ಬಂದಿಸಿ ನಮ್ಮ ಪೆಟ್ಟಿಗೆಯನ್ನು ಮರಳಿಸಿ ಮೊಹರಂನ ಮೊದಲು ಪೂಜೆಗೆ ವ್ಯವಸ್ಥೆ ಕಲ್ಪಿಸಿ ಕಲ್ಪಿಸಬೇಕೆಂದರು.

ತಹಸೀಲ್ದಾರ್ ಬೇಟಿ
ಘಟನಾ ಸ್ಥಳಕ್ಕೆ ಮೂಡಬಿದರೆ ತಹಸೀಲ್ದಾರ್ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಉಭಯ ಪಂಗಡದ ಮುಖಂಡರ ಜೊತೆ ಚರ್ಚೆ ನಡೆಸಿ ವಿವಾದವನ್ನು ಬಗೆಹರಿಸಲಾಗುವುದೆಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

By suddi9

Leave a Reply

Your email address will not be published. Required fields are marked *