ಮೂಡುಬಿದರೆ: ಕಳಪೆಗುಣಮಟ್ಟದ ಮೊಬೈಲ್ಗಳ ತರಂಗಗಳು ಮಕ್ಕಳು, ಗರ್ಭಿಣಿಯರ ಮೇಲೆ ದುಷ್ಪರಿಣಾಮ ಬೀರುವ ಅಪಾಯವಿದೆ.ಅಗತ್ಯವಿಲ್ಲದ ಸಮಯದಲ್ಲಿ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಇಡುವುದು ಉತ್ತಮ. ಹೆಡ್ಫೋನ್ಗಳ ಬಳಕೆ ಮಾಡುವುದು ಒಳ್ಳೆಯದು. ಆದರೆ ಅತಿಯಾದ ಧ್ವನಿಯಲ್ಲಿ ಕೇಳಿದರೆ ಕಿವಿ ತಮಟೆ ನಿಷ್ಕ್ರಿಯಗೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ನಿಷ್ಕ್ರಿಯ ಮಿತ್ರರನ್ನು ಮಾತ್ರ ಪಡೆಯಲು ಸಾಧ್ಯ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಅಮೂಲ್ಯವಾದ ಸಮಯ ಅನಗತ್ಯವಾಗಿ ವ್ಯಯವಾಗುತ್ತದೆ ಎಂದು ಖ್ಯಾತ ವೈದ್ಯ ಡಾ.ಕೃಷ್ಣಮೋಹನ ಪ್ರಭು ಹೇಳಿದರು.

ರೋಟರಿ ಕ್ಲಬ್ ಟೆಂಪಲ್ಟೌನ್ ಮೂಡುಬಿದರೆ ವತಿಯಿಂದ ರೋಟರಿ ಶಾಲೆಯ ಸಮ್ಮಿಲನ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ `ಮೊಬೈಲ್ ಮಕ್ಕಳು ಮತ್ತು ಆರೋಗ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್ನ ಮುಖ್ಯ ಶಿಕ್ಷಕ ಫಣಿರಾಜ್ ಎಂ. ಹಾಗೂ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಅಧ್ಯಾಪಕಿ ದೇವಕಿ ಭಟ್ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ನ ಅಧ್ಯಕ್ಷ ಉಮೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕ ಹೇಮಚಂದ್ರ ಆಚಾರ್ಯ ದಂಪತಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿನ್ಸೆಂಟ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.
