ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಶಾಖೆಯ ಮಹಾಸಭೆಯು ಬಿ.ಸಿ,.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಮುಖ್ಯ ಅತಿಥಿಯಾಗಿ ಬಾಗವಹಿಸಿ ಮಾತನಾಡಿ ಬೆಂಗಲುರಿನ ಅರಮನೆ ಮೈದಾನದಲ್ಲಿ ಡಿ.19ಮತ್ತು2)ರಂದು ಅಖಿಲ ಭಾರತ ಶಿಕ್ಷಕರ ಸಮ್ಮೆಳನ ನಡೆಯಲಿದ್ದು ಈ ಸಮ್ಮೆಳನದಲ್ಲಿ ಸಮಾನ ಶಿಕ್ಷಣ, ಸಮಾನ ವೇತನ, ಸಮಾನ ಶಾಲೆ ಸಹಿತ ಶಿಕ್ಷಕರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಂಡು ಬೇಡಿಕೆಗಳ ಈಡೇರಿಕೆಗೆ ಸರಕಾರವನ್ನು ಒತ್ತಾಯಿಸಲಾಗುವುದು. ಎಲ್ಲಾ ಶಿಕ್ಷಕರು ಸಮ್ಮೆಲನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ, ರಾಜ್ಯ ಸಂಘದ ನಾಮ ನಿರ್ದೇಶಿತ ಸದಸ್ಯ ರಮೇಶ ನಾಯಕ್ ರಾಯಿ, ಜಿಲ್ಲಾಧ್ಯಕ್ಷ ಶಿವಶಂಕರ ಭಟ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಮಲಾರ್, ಕೋಶಾಧಿಕಾರಿ ನವೀನ್ ಪಿ.ಎಸ್, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಸಮನ್ವಯಾಧಿಕಾರಿ ರಾಜೇಶ್ ಜಿ.ಮೊದಲಾದವರಿದ್ದರು. ಚಿತ್ರ ಇದೆ; ಕಿಶೋರ್ ಪೆರಾಜೆ
