ಬಂಟ್ವಾಳ: ಅಣ್ಣಾ ನಾನು ಬಿಕ್ಷೆ ಬೇಡುತ್ತಿಲ್ಲ, ನನ್ನ ತಂಗಿಗೆ ಬರುವ ತಿಂಗಳು ಮದುವೆ ಇದೆ ಅಣ್ಣಾ, ತಂಗಿ ಮದುವೆಗೆ ಹಣ ಇಲ್ಲ ಅಣ್ಣಾ ಅದಕ್ಕಾಗಿ ಹಣ ಹೊಂದಾಣಿಕೆ ಮಾಡುತ್ತಿದ್ದೇನೆ, ನಿಮ್ಮಂತಹ ಅಣ್ಣಾನವರು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಿ ಅಣ್ಣಾ. ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ, ಹೀಗೆ ಹೊಗಲಿಕೆಯ ಮಾತುಗಳ ಮೂಲಕ ಜನರನ್ನು ಮರುಳು ಮಾಡಿ ಸಹಾಯದ ನೆಪ ಹೇಳಿ ಬಿಕ್ಷೆಯ ಮೂಲಕ ಹಣ ಮಾಡುವ ದಂದೆ ಇತ್ತೀಚೆಗೆ ಜೋರಾಗಿ ನಡೆಯುತ್ತಿದೆ.

ಊರು ಕೇಳಿದರೆ ಶಿವಮೊಗ್ಗ ದವರು ಎಂದು ಹೇಳಿಕೊಳ್ಳುತ್ತಾರೆ . ಎಷ್ಟು ಜನ ಬಂದಿದ್ದೀರಿ ಎಂದರೆ ನಾಲ್ಕು ಎನ್ನುತ್ತಾರೆ. ಆದರೆ ಅವರಿಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ಇಂತಹ ಬಿಕ್ಷಾಟನೆಗಳು ದಿನ ನಿತ್ಯ ಕಾಣ ಸಿಗುತ್ತದೆ. ಬಿಕಾಟನೆಯಲ್ಲೂ ಬದಲಾವಣೆ ಬಂದಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಎಲ್ಲಾ ರಂಗಗಳಲ್ಲೂ ಬದಲಾವಣೆ ಬಂದ ರೀತಿಯಲ್ಲಿ ಬಿಕ್ಷಾಟನೆಯಲ್ಲೂ ಮೋಡಿಪೈಡ್ ತಂದಿದ್ದಾರೆ . ಆರೋಗ್ಯವಂತರಾಗಿದ್ದು ದುಡಿದು ತಿನ್ನುವ ಶಕ್ತಿಯಿದ್ದರೂ ಬಿಕ್ಷಾಟನೆಯಲ್ಲಿ ತೊಡಗಿರುವವರಿಗೆ ಹಣ ನೀಡಿ ಪ್ರೋತ್ಸಾಹ ಮಾಡುವುದು ಸರಿಯೇ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಸ್ಥಳಿಯ ಆಡಳಿತ ಇಂತಹವರಿಗೆ ಅವಕಾಶ ನೀಡಬಾರದು ಎಂದು ಸರಕಾರದ ಸುತ್ತೋಲೆ ಇದ್ದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದ ಇರುವ ಆಡಳಿತದ ಬಗ್ಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ.
