ಬಂಟ್ವಾಳ : ಲಯನ್ಸ್ ಪ್ರಾಂತ್ಯ – 7ರ “ಪ್ರಾಂತೀಯ ಸಮ್ಮಿಲನ” ನವೆಂಬರ್ 22ರಂದು ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಲಯನ್ಸ್ ಸೇವಾ ಮಂದಿರದಲ್ಲಿ ಪ್ರಾಂತೀಯ ಅಧ್ಯಕ್ಷರಾದ ದಾಮೋದರ ಬಿ. ಎಂ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಮ್ಮೇಳನದ ಪ್ರಧಾನ ಸಲಹೆಗಾರರಾದ ಎಂ.ಬಿ.ಸದಾಶಿವ, ಗೀತ ಪ್ರಕಾಶ್, ದೇವಪ್ಪ ಶೆಟ್ಟಿ ಸಲಹೆಯನ್ನು ನೀಡಿದರು. ಸಮ್ಮೇಳನದ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿಯವರು ವಿವಿಧ ಸಮಿತಿ, ಜವಾಬ್ದಾರಿ ಮತ್ತು ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷರುಗಳಾದ ಜಾಕೆ ಮಾಧವ ಗೌಡ ಹಾಗೂ ಮಹಮ್ಮದ್ ಇಕ್ಬಾಲ್ ಇವರು ಭಾಗವಹಿಸಿದರು. ಪ್ರಾಂತ್ಯದ ವಿವಿಧ ಕ್ಲಬ್ನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಜಯಂತ ಶೆಟ್ಟಿ ವಂದಿಸಿದರು.
