ಬಂಟ್ವಾಳ: ಬ್ರಾಹ್ಮಣ್ಯ, ವೇದ ಹಾಗೂ ಶಿಲ್ಪಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ತರವಾದುದು, ಸಂಸ್ಕಾರಭರಿತ ಶಿಕ್ಷಣದ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕ್ರತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇಂದಿನದು ಎಂದು ಮಂಗಳೂರು ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಲೋಕೇಶ ಆಚಾರ್ಯ ಪೂಂಜಾಲಕಟ್ಟೆ ಅಭಿಪ್ರಾಯ ಪಟ್ಟರು.
ಜೋಡುಮಾರ್ಗದ ವಿಶ್ವಕರ್ಮ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡು ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ 22 ನೇ ವರ್ಷದ ವಿಶ್ವಕರ್ಮ ಪೂಜಾಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ವಿಶ್ವಕರ್ಮ ಸಮುದಾಯದ ಸಾಧಕರನ್ನು ಹಾಗೂ ಗ್ರಾಮಪಂಚಾಂಯತ್ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಉಮೇಶ್ ಆಚಾರ್ಯ, ವಿಶ್ವಕರ್ಮ ಸಮಾಜ ಸೇವಾಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ವಿಶ್ವಜ್ಯೋತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಗೀತಾ ರಮೇಶ್ ಆಚಾರ್ಯ ಕಲ್ಲಡ್ಕ, ಧಾರ್ಮಿಕ ಕಾರ್ಯದರ್ಶಿ ಕಳ್ಳಿಗೆ ನಾರಾಯಣ ಆಚಾರ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಇತ್ತೀಚೆಗೆ ನಿಧನರಾದ ಎಸ್.ಎಂ.ಜನಾರ್ಧನ ಆಚಾರ್ಯ ಹಾಗೂ ಬಿ.ಸಿ.ರೋಡು ಕೈಕಂಬ ಲಿಂಗಪ್ಪ ಆಚಾರ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ಸಾಧಕರಿಗೆ ಸನ್ಮಾನ;
ಸಭಾ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪಿ ದೇವರಾಜ ಆಚಾರ್ಯ, ಕಾಷ್ಠಶಿಲ್ಪಿ ತಿಮ್ಮಪ್ಪ ಆಚಾರ್ಯ ಹಾಗೂ ಸರಪಾಡಿ ಹರೀಶ್ಚಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.
ಅಭಿನಂದನೆ;
ಕಳೆದ 2015 ರ ಸಾಲಿನ ಚುನಾವಣೆಯಲ್ಲಿ ಗ್ರಾ.ಪಂ. ಚುನಾಯಿತರಾದ ಹರೀಶ್ ಆಚಾರ್ಯ ರಾಯಿ, ಮನೋಜ್ ಆಚಾರ್ಯ ನಾಣ್ಯ, ಪ್ರಕಾಶ ಆಚಾರ್ಯ ತುಂಬೆ, ಲಕ್ಷ್ಮೀ ಗೋಪಾಲ ಆಚಾರ್ಯ ಬಾಳ್ತಿಲ, ವಾಮನ ಆಚಾರ್ಯ ಅಮ್ಮುಂಜೆ, ವೀಣಾ ಉಮೇಶ್ ಆಚಾರ್ಯ ಕರಿಯಂಗಳ, ಯೋಗಿಶ್ ಆಚಾರ್ಯ ಎಲ್ಪೇಲು, ಶಾಲಿನಿ ಜಗದೀಶ್ ಆಚಾರ್ಯ ಪಂಜಿಕಲ್ಲು ರವರನ್ನು ಅಭಿನಂದಿಸಿ ಗೌರವಿಸಲಾಯಿತು. ರಮೇಶ್ ಪುರೋಹಿತ್ ನೇತೃತ್ವದಲ್ಲಿ ವಿಶ್ವಕರ್ಮ ಪೂಜೆಯ ವೈಧಿಕ ವಿಧಿವಿಧಾನಗಳು ನಡೆಯಿತು. ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ವಿಶ್ವಜ್ಯೋತಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ನಡೆಸಿದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕಳೆದ ಎಪ್ರಿಲ್ ತಿಂಗಳ ಪರೀಕ್ಷೆಯಲ್ಲಿ ಅತೀ ಹೆಚು ಅಂಕ ಪಡೆದ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕೋಶಾಧಿಕಾರಿ ಜಯಚಂದ್ರ ಆಚಾರ್ಯ ಸರಪಾಡಿ, ವಿ.ಜ್ಯೊ.ಮ.ಮಂಡಳಿ ಕಾರ್ಯದರ್ಶಿ ವಿದ್ಯಾ ರತ್ನಾಕರ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಹೇಮಾಪುರಂದರ ಆಚಾರ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಕಾಶ ಆಚಾರ್ಯ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ವಂದಿಸಿದರು. ಪತ್ರಕರ್ತ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕ್ರತಿಕ ಕಾರ್ಯದರ್ಶಿ ಸುನಿಲ್.ಬಿ.ಆಚಾರ್ಯ, ಪದಾಧಿಕಾರಿಗಳಾದ ಅಶೋಕ್ ಆಚಾರ್ಯ, ಚಂದ್ರಶೇಖರ ಆಚಾರ್ಯ ಪೂಂಜರಕೋಡಿ ಮೊದಲಾದವರು ಸಹಕರಿಸಿದರು.
ಅಪರಾಹ್ನದ ಬಳಿಕ ವಿಶ್ವಜ್ಯೋತಿ ಮಹಿಳಾ ಮಂಡಳಿಯ ವತಿಯಿಂದ ನಿತಿನ್ ಕಲ್ಲಡ್ಕ ನಿರ್ದೇಶನದಲ್ಲಿ “ತುಳುನಾಡ ವೈಭವ” ಹಾಗೂ ಸಮಾಜ ಬಾಂಧವರಿಂದ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.
