ಬಂಟ್ವಾಳ:  ಭಾರತ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಬ್ಯಾಂಕ್ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ, ನೇತ್ರ ಚಿಕಿತ್ಸಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವು ಬ್ಯಾಂಕಿನಲ್ಲಿ ನಡೆಯಿತು. ಹರೀಶ್ ಶಾಂತಿಯವರಿಂದ ಗುರು ಪೂಜೆಯೊಂದಿಗೆ ಆರಂಭಗೊಂಡು ಕಾರ್ಯಕ್ರಮವನ್ನು ಎ.ಜೆ.ವೈದ್ಯಕೀಯ ಮಹಾವಿದ್ಯಾಲಯದ ಕಣ್ಣಿನ ವಿಭಾಗದ ಮುಖ್ಯಸ್ಥರಾದ ಡಾ|| ಸುಧೀರ್ ಹೆಗ್ಡೆಯವರು ದೀಪ ಬೆಳಗಿಸುದರ ಮೂಲಕ ಉಧ್ಟಾಟಿಸಿದರು.

001ಈ ಸಂದರ್ಭದಲ್ಲಿ ಜಯರಾಜ್ ಸುವರ್ಣ,ಡಾ|| ಮನೋಹರ್ ರೈ, ಬಿಲ್ಲವ ಮಹಾಮಂಡಲದ ವಕ್ತಾರರಾದ ಹರೀಕೃಷ್ಣ ಬಂಟ್ವಾಳ, ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸೇಸಪ್ಪ ಕೋಟ್ಯಾನ್, ರುಕ್ಮಯ ಪೂಜಾರಿ ಮಾಜಿ ಶಾಸಕರು, ಬಿರ್ವ ಸೆಂಟರಿನ ಸಂಜೀವ ಪೂಜಾರಿ, ಪ್ರಕಾಶ್ ಸೋಮಾಯಜಿ, ವಕೀಲರಾದ ಅಶ್ವಿನಿ ಕುಮಾರ್ ರೈ, ರಿಚರ್ಡ್ ಸಿಕ್ವೇರಾ, ಉದಯ್ ರೈ, ಜಿ.ಆನಂದ್, ಗುರುಕೃಪಾದ ಸಂಜೀವ ಪೂಜಾರಿ, ಬ್ಯಾಂಕಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍ರಾದ ಬಾಲಕೃಷ್ಣ ಕರ್ಕೇರ, ಚೀಪ್ ಮ್ಯಾನೇಜರ್ ರಾಘವ ಬಂಗೇರ, ಬ್ರಾಂಚಿನ ಮುಖಸ್ಧರಾದ ಹೇಮ ಸುವರ್ಣ, ಅಸಿಸ್ಟೆಂಟ್ ಮ್ಯಾನೇಜರ್ ಶಕುಂತಳಾ ನರೇಂದ್ರ ಹಾಗು ಬ್ಯಾಂಕಿನ ಶಾಖಾ ಪ್ರಮುಖರು ಹಾಗು ಸಿಬ್ಬಂದಿ ವರ್ಗದವರು ಉಪಸ್ಧಿತರಿದ್ದರು. ಬಾಲಕೃಷ್ಣ ಕರ್ಕೇರರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಾರ್ವಜನಿಕರಿಗೆ ಎ.ಜೆ. ಆಸ್ಪತ್ರೆಯ ನುರಿತ ವ್ಯೆದ್ಯರಿಂದ ಕಣ್ಣಿನ ತಾಪಾಸಣೆ ಮಾಡಿ ಉಚಿತವಾಗಿ ಕನ್ನಡಕ ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *