ಬಂಟ್ವಾಳ : ಪಾಣೆಮಂಗಳೂರು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನೆ ಹಾಗೂ ರೈತರಿಗೆ ಮಾಹಿತಿ ಕಾರ್ಯಕ್ರಮವು ಶನಿವಾರ ಮೆಲ್ಕಾರ್ ಬಿರ್ವ ಸೆಂಟರ್‍ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫೆಡರೇಶನ್ ಅಧ್ಯಕ್ಷ ಎಸ್. ಅಬ್ಬಾಸ್ ಸಜಿಪ ಮಾತನಾಡಿ ತೆಂಗು ಬೆಳೆಗಾರರು ಫೆಡರೇಶನ್ ವೇದಿಕೆಯಡಿ ಒಟ್ಟಾಗಿ ಸರಕಾರದ ಸೌಲಭ್ಯ ಪಡೆಯಲು ಶ್ರಮಿಸಬೇಕು ಎಂದು ತೆಂಗು ಬೆಳೆಗಾರರಿಗೆ ಕರೆ ನೀಡಿದರು.
ಸಹಾಯಕ ತೋಟಗಾರಿಕಾ ಪ್ರಭಾರ ಉಪನಿರ್ದೇಶಕ ದಿನೇಶ್ ತೆಂಗು ಬೆಳೆಗಾರರಿಗೆ ಪೂರಕ ಮಾಹಿತಿ ನೀಡಿದರು. ಫೆಡರೇಶನ್ ಉಪಾಧ್ಯಕ್ಷರಾದ ಯೂಸುಫ್ ಕರಂದಾಡಿ, ಪದ್ಮನಾಭ ನರಿಂಗಾನ, ಕೋಶಾಧಿಕಾರಿ ಚಂದ್ರಹಾಸ ಕರ್ಕೇರಾ, ಕಾರ್ಯದರ್ಶಿ ವೆಂಕಟ್ರಮಣ ಭಟ್, ಜೊತೆ ಕಾರ್ಯದರ್ಶಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಡೊನಾಲ್ಡ್ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು.

