ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 9ವಕ್ಫ್ ಸಂಸ್ಥೆಗಳ ಅಭಿವೃದ್ಧಿಗಾಗಿ ರೂ.11ಲಕ್ಷ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಸಜೀಪಮುನ್ನೂರು ಗ್ರಾಮದ ನಂದಾವರ ಮಸೀದಿಗೆ ರೂ 2ಲಕ್ಷ, ಸರಪಾಡಿ ಗ್ರಾಮದ ಪೆರ್ಲ ಬದ್ರಿಯಾ ಜುಮ್ಮಾ ಮಸೀದಿ, ಕನ್ಯಾನ ಟೌನ್ ಜುಮ್ಮಾ ಮಸೀದಿ, ಮಲಾಯಿಬೆಟ್ಟು ಮೊಹಿಯುದ್ದೀನ್ ಜುಮ್ಮಾ ಮಸೀದಿ, ಸಜೀಪ ಮೂಡ ಕಾರಾಜೆಪಡ್ಪು ದಾರುಲ್ ಹುದಾ ಜುಮ್ಮಾ ಮಸೀದಿ, ಸಂಗಬೆಟ್ಟು – ಕೆರೆಬಳಿ ಮುಹಿಯುದ್ದೀನ್ ಜುಮ್ಮಾ ಮಸೀದಿ, ಅಲ್ಲಿಪಾದೆ ಕುಲಾಲ್ ಬದ್ರಿಯಾ ಜುಮ್ಮಾ ಮಸೀದಿ, ತೆಂಕಕಜೆಕಾರು ಲಿಂಗಸ್ಥಳ ಬದ್ರಿಯಾ ಜುಮ್ಮಾ ಮಸೀದಿ, ವೀರಕಂಭ ಜುಮ್ಮಾ ಮಸೀದಿ ಹಾಗೂ ಬೊಳ್ಳಾಯಿ ಬದ್ರಿಯಾ ಜುಮ್ಮಾ ಮಸೀದಿಗಳಿಗೆ ತಲಾ ರೂ.1 ಲಕ್ಷ ಅನುದಾನ ಮಂಜೂರಾಗಿದೆ.
