ಬಂಟ್ವಾಳ : ಅಪ್ರಾಪ್ತ ಯುವತಿಯೋರ್ವಳು ನಾಪತ್ತೆಯಾದ ಘಟನೆ ಕಾವಳಮೂಡೂರು ಗ್ರಾಮದ ಕಳಸಡ್ಕ ಮನೆ ಕಾರಿಂಜ ಎಂಬಲ್ಲಿ ಸೆ.24ರಂದು ಸಂಭವಿಸಿದೆ.

ಇಲ್ಲಿನ ನಿವಾಸಿ ಪದ್ಮಾ ದೇವಾಡಿಗ ಅವರ ಪುತ್ರಿ ಸಂಧ್ಯಾ(17) ನಾಪತ್ತೆಯಾಗಿರುವವಳು. ಬೆಳಗ್ಗೆ ಮನೆಯಿಂದ ಪುಂಜಾಲಕಟ್ಟೆಗೆ ಮೊಬೈಲ್ ರಿಪೇರಿಗೆಂದು ಹೋದವಳು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಬಳಿಕ ಸಂಬಂಕರ ಮನೆ ಸಹಿತ ಎಲ್ಲೆಡೆ ಹುಡುಕಾಡಿ ಸಿಗದಿರುವುದರಿಂದ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಅವಳ ತಾಯಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಂಧ್ಯಾ 5 ಅಡಿ ಎತ್ತರವಿದ್ದು ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ. ಬಿಳಿ ಬಣ್ಣದ ಚೂಡಿದಾರ ದರಿಸಿದ್ದಾಳೆ. ಅವಳ ಬಗ್ಗೆ ತಿಳಿದು ಬಂದಲ್ಲಿ ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ನೀಡಬೇಕಾಗಿ ಪೊಲೀಸರು ತಿಳಿಸಿದ್ದಾರೆ.
