ಬಂಟ್ವಾಳ : ತಾಲೂಕಿನ ಪ್ರಥಮ ಸಿನಿಬ್ಯಾನರ್ ಎಂಬ ಖ್ಯಾತಿಯ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನ್ಯಾಯವಾದಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್ ಅವರಿಂದ ಮುತ್ತಪ್ಪ ರೈ ಪುತ್ತೂರು ಅವರ ಸಹಕಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಚೊಚ್ಚಲ ತುಳು ಚಲನಚಿತ್ರ ಪನೊಡಾ ಬೊಡ್ಚಾ ಇದರ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ನಡೆದಿದೆ.
ಕಳೆದ ತಿಂಗಳ 30ರಂದು ಶ್ರೀ ಕ್ಷೇತ್ರ ಕಾರಿಂಜದ ಶಿವಪಾರ್ವತಿ ಸನ್ನಿ„ಯಲ್ಲಿ ಚಾಲನೆಗೊಂಡ ಚಿತ್ರೀಕರಣ ಮುತ್ತಪ್ಪ ರೈ ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್‍ನಲ್ಲಿ ನಡೆಯಿತು.
ಮೊದಲ ಹಂತದ ಚಿತ್ರೀಕರಣದಲ್ಲಿ ನಟರಾದ ಶಿವಧ್ವಜ್, ಸೀತಾ ಕೋಟೆ, ಯೋಗೀಶ್ ಆಚಾರ್ಯ, ನವೀನ್ ಡಿ. ಪಡೀಲ್, ಕಿಶೋರ್ ಡಿ.ಶೆಟ್ಟಿ , ಸುಂದರ ರೈ ಮಂದಾರ, ಭೋಜರಾಜ್ ವಾಮಂಜೂರ್, ಇಳಾ ವಿಟ್ಲ, ಶಕುಂತಳಾ, ರವಿ ಕುಮಾರ್ ಸುರತ್ಕಲ್ ಮೊದಲಾದವರು ಭಾಗವಹಿಸಿದ್ದರು. ಕಲಾವಿದರು ಮತ್ತು ತಂತ್ರಜ್ಞರು ಇನ್ನೊಂದು ತುಳು ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿರುವುದರಿಂದ ಹೊಂದಾಣಿಕೆಯಲ್ಲಿ ಮುಂದಿನ ಹಂತದ ಚಿತ್ರೀಕರಣ ಅ.1ರಿಂದ 18 ದಿನಗಳ ಕಾಲ ಬಂಟ್ವಾಳ ಮತ್ತು ಬಿ.ಸಿ.ರೋಡ್ ಸುತ್ತಮುತ್ತ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿದೆ.

2409pkt12

2409pkt12A
ಈಗಾಗಲೆ ಹಲವಾರು ಚಿತ್ರಕ್ಕೆ ತಂತ್ರಜ್ಞರಾಗಿ ದುಡಿದಿರುವ ಮಧು ಸುರತ್ಕಲ್ ಚಿತ್ರ ನಿರ್ದೇಶಿಸಲಿದ್ದಾರೆ. ಕೌಟುಂಬಿಕ ಕಥಾಹಂದರವಿರುವ ಚಿತ್ರದಲ್ಲಿ ಉತ್ತಮ ಹಾಸ್ಯವಿದೆ. ಶಿವಧ್ವಜ್, ವಿನಯ ಪ್ರಸಾದ್, ಸೀತಾ ಕೋಟೆ, ಶಕುಂತಲಾ, ಇಳಾ ವಿಟ್ಲ , ನವೀನ್ ಡಿ. ಪಡೀಲ್, ಕಿಶೋರ್ ಡಿ. ಶೆಟ್ಟಿ, ಸುಂದರ ರೈ ಮಂದಾರ, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ರಾಘವೇಂದ್ರ ರೈ, ಚೇತನ್ ರೈ ಮಾಣಿ, ಯೋಗೀಶ್ ಆಚಾರ್, ಉಮೇಶ್ ಮಿಜಾರ್, ಗಿರೀಶ್ ಶೆಟ್ಟಿ , ಚಂದ್ರಹಾಸ ಶೆಟ್ಟಿ ಮಾಣಿ, ಸತೀಶ್ ಅಮೀನ್ ಕಲ್ಲಮುಂಡ್ಕೂರು, ಶೋಭಾ ಶೆಟ್ಟಿ, ಅನಿಶಾ, ರವಿ ಸುರತ್ಕಲ್, ಕುಂಬ್ರ ದುರ್ಗಾ ಪ್ರಸಾದ್ ರೈ, ಬೇಬಿ ತೀರ್ಥ, ಬೇಬಿ ವೈಭವಿಲಕ್ಷ್ಮಿಮತ್ತಿತರರು ಪ್ರಮುಖ ತಾರಾಗಣದಲ್ಲಿದ್ದಾರೆ. ಸುಂದರ ರೈ ಮಂದಾರ ಅವರ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ಮಾಣ, ಎಚ್ಕೆ ನಯನಾಡು, ವಸಂತ ಅಮೀನ್ ಅವರ ಸಾಹಿತ್ಯವಿದೆ. ಚಂದ್ರಕಾಂತ್ ಶೆಟ್ಟಿ ಸಂಗೀತ ನೀಡಲಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು ಕೇಶವ ಸುವರ್ಣ ಅವರ ಕಲಾ ನಿರ್ದೇಶನವಿದೆ. ಗಣೇಶ್ ಶೆಟ್ಟಿ ಸುಧೆಕಾರ್, ಚಂದ್ರಹಾಸ ಶೆಟ್ಟಿ, ಎಚ್ಕೆ ನಯನಾಡು ಕಾರ್ಯಕಾರಿ ನಿರ್ಮಾಪಕರಾಗಿದ್ದು, ರಾಕೇಶ್ ನಿರ್ಮಾಣ ಸಹಾಯಕರಾಗಿದ್ದಾರೆ. ಸಚಿನ್ ಶೆಟ್ಟಿ ಕುಂಬ್ಳೆ ಸಹನಿರ್ದೇಶನ, ಶ್ರೀನಿವಾಸ ಪಿ.ಬಾಬು ಅವರ ಸಂಕಲನವಿದೆ.

By suddi9

Leave a Reply

Your email address will not be published. Required fields are marked *