ಬಂಟ್ವಾಳ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ದುಖ: ತಪ್ತ ತಾಯಿ ಸುಗಂಧಿ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

8

1

2

3

4

5

6

7 ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿಯೇ ಇದೊಂದು ಅಘಾತಕಾರಿ ಘಟನೆ. ಮಾನಸಿಕ ಖಿನ್ನತೆಯಿಂದಾಗಿ ಹೆಂಡತಿ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮೇಲ್ನೋಟಕ್ಕೆ ತಿಳಿಸಿದ್ದರೂ ಕೂಡ ಇದರ ಸಂಪೂರ್ಣ ತನಿಖೆಯಾಗಬೇಕು, ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿದ ಬಳಿಕ ಪೋಸ್ಟ್ಮಾರ್ಟಮ್ ವರದಿಯನ್ನು ಆಧರಿಸಿ, ಪೊಲೀಸರ ಪೂರ್ಣವಾದ ವರದಿಯನ್ನು ತರಿಸಿ, ವಿವಿಧ ಆಯಾಮಾಗಳಲ್ಲಿ ತನಿಖೆಯನ್ನು ನಡೆಸುವಂತೆ ಆಗ್ರಹಿಸುತ್ತೇನೆ.  ಈ ಘಟನೆಯ ಬಗ್ಗೆ ಈಗಾಗಲೇ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಶೀಘ್ರವೇ ಕೊಲೆಯ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ. ಈ ಸಂದರ್ಭ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಂಚಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಉಪಾರ್ಧಯಕ್ಷ ಮೋಹನ್ದಾಸ್ ಶೆಟ್ಟಿ, ಪ್ರಮುಖರಾದ ರಮೇಶ್ ರಾವ್, ಚಂದ್ರಶೇಖರ್, ಗೋವೀಂದ ನಾಯಕ್, ಉದಯ ಕುಮಾರ್, ಗೋಪಾಲ ಸಿಂಗರಕೋಡಿ, ರಮ್ಯ ಆಲಾಬೆ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *