ಬಂಟ್ವಾಳ: ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಖಂಡಿತ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಎಂ.ಕವಿತಾ ಶಾಸ್ತ್ರಿ ಹೇಳಿದರು.
ಬಂಟ್ವಾಳ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ನ ಆಶ್ರಯದಲ್ಲಿ ಬಂಟ್ವಾಳದ ಎಸ್‍ವಿಎಸ್ ಕಾಲೇಜಿನಲ್ಲಿ ಬುಧವಾರ ಸ್ನಾತಕೋತ್ತರ ವಿದ್ಯಾರ್ಥಿಗಳೀಗಾಗಿ ಆಯೋಜಿಸಲಾಗಿದ್ದ ಸ್ಪೂರ್ತಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವು ಹುಡುಕಬೇಕು ಎಂದ ಅವರು, ನಮ್ಮ ಪರಿಸರ ಧನಾತ್ಮಕವಾಗಿರಬೇಕು, ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಯುವಪೀಳಿಗೆಯಲ್ಲಿ ಸ್ಪೂರ್ತಿ ಹೆಚ್ಚಿಸುವ ಸಂಕಿರಣಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ಜಿಲ್ಲಾ ಲಯನ್ಸ್ ಲಿಯೋ ಚೆಯರ್‍ಪರ್ಸನ್ ಆಗ್ನೆಲ್ ರೊಡ್ರಿಗಸ್ ಮಾತನಾಡಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಸ್ಪೂರ್ತಿ ತುಂಬುವ ಕೆಲಸ ನಮ್ಮಿಂದ ಆಗಬೇಕು. ನಾನೇನು ಆಗಬೇಕು ಎನ್ನುವುದನ್ನು ನಾವೇ ನಿರ್ಧರಿಸಬೇಕು. ಸವಾಲುಗಳನ್ನು ಎದುರಿಸುವ ಕಲೆ ಕರಗತ ಮಾಡಿಕೊಳ್ಳ ಬೇಕು ಆಗ ನಮ್ಮೊಳಗೆ ಅಂತರ್ಗತವಾಗಿರುವ ಶಕ್ತಿಯನ್ನು ಹೊರಗೆಡವÀಲು ಸಾಧ್ಯ ಎಂದರು.
ಎಸ್‍ವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕರು ದೇಶದ ಭವಿಷ್ಯ. ಕಾರ್ಯಗಾರಕ್ಕೆ ಸ್ಫೂರ್ತಿ ಎಂದು ಹೆಸರಿಟ್ಟುರವುದು ಅರ್ಥಪೂರ್ಣ. ನಾವು ಯಾವುದೇ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸ ಬೇಕಾದರೆ ಸಕರಾತ್ಮಕ ಸ್ಪೂರ್ತಿ ನಮ್ಮಲ್ಲಿರ ಬೇಕು. ಸಕರಾತ್ಮಕ ನಡಾವಳಿಕೆಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.
ಲಯನ್ಸ್ ಪ್ರಾಂತೀಯ ಅದ್ಯಕ್ಷ ದಾಮೋದರ ಬಿ.ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಡಾ.ಪರಮೇಶ್ವರ ಭಟ್ ಸ್ವಾಗತಿಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಂತ ಶೆಟ್ಟಿ ವಂದಿಸಿದರು. ವಸಂತ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕರಾದ ಲಕ್ಷ್ಮಣ್ ಅಗ್ರಬೈಲು ಹಾಗೂ ಉಮೇಶ್ ಆಚಾರ್ ಸಹಕರಿಸಿದರು.
