ಬಜ್ಪೆ: ಅಕ್ರಮವಾಗಿ ಕೂಡಿಟ್ಟ ಸುಮಾರು 20 ಹಸುಗಳನ್ನು ಪೊಲೀಸರು ವಶಪಡಿಸಿದ ಘಟನೆ ಮಂಗಳವಾರ ರಾತ್ರಿ ಗುರುಪುರ ಕೈಕಂಬ ಸಮೀಪದ ಗುರುಕಂಬ್ಳ ಮಸೀದಿ ಬಳಿ ನಡೆದಿದೆ.
ಆರೋಪಿಗಳು ಎಲ್ಲಿಂದಲೋ ಕದ್ದು ತಂದ ಹಸುಗಳನ್ನು ಗುರುಕಂಬ್ಳದ ಮಸೀದಿ ಸಮೀಪ ನಿರ್ಮಿಸಿದ ತಗಡಿನ ಶೀಟಿನ ತಾತ್ಕಾಲಿಕ ಶೆಡ್ಡಿನಲ್ಲಿ ಅಕ್ರಮವಾಗಿ ಕೂಡಿಟ್ಟಿದ್ದರು. ಈ ಬಗ್ಗೆ ಸ್ಥಳೀಯರು ಬಜ್ಪೆ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಹಸುಗಳು ಕಂಡುಬಂದಿವೆ. ಅವುಗಳನ್ನು ಸಾರ್ವಜನಿಕರ ಸಹಾಯದಿಂದ ವಶಕ್ಕೆ ತೆಗೆದುಕೊಂಡು ಗೋ ಆಶ್ರಮಕ್ಕೆ ಒಪ್ಪಿಸಲಾಗಿದೆ. ಹಬ್ಬದ ಸಲುವಾಗಿ ಈ ಹಸುಗನ್ನು ಕದ್ದು ಮಾಂಸ ಮಾಡಲೆಂದು ತಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹಸುಗಳನ್ನು ಕದ್ದು ತಂದ ಆರೋಪಿಗಳು ಮಾಹಿತಿ ಸಿಕ್ಕಂತೆ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ
