ಮುಲ್ಕಿ: ಬಂಟರ ಸಂಘದ ವಾರ್ಷಿಕ ಮಹಾಸಭೆ ಸೆಪ್ಟಂಬರ್ 27ರಂದು ಬೆಳಿಗ್ಗೆ 10.30 ರಿಂದ ಮುಲ್ಕಿ ಕಾರ್ನಾಡುವಿನ ಬಂಟರ ಸಂಘದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆಯವರ ಆದ್ಯಕ್ಷತೆಯಲ್ಲಿ ನಡೆಯಲಿದೆ.
ಮುಂಬೈ ಬಂಟರ ಸಂಘದ ಆಧ್ಯಕ್ಷ ಕರ್ನಾರೆ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು ,ಬೆಂಗಳೂರು ಬಂಟರ ಸಂಘದ ಅದ್ಯಕ್ಷ ಡಾ.ನರೇಶ್ ಶೆಟ್ಟಿ,ಬೆಂಗಳೂರು ಬಂಟರ ಸಂಘದ ಕಾರ್ಯದರ್ಶಿ ಎಚ್. ಶ್ರೀಧರ ಶೆಟ್ಟಿ,ಬೆಂಗಳೂರು ಬಂಟರ ಸಂಘದ ಸಮಾಜ ಸೇವಾ ವಿಭಾಗದ ಚೆಯರ್ಮ್ಯಾನ್ ಆಮರನಾಥ ಶೆಟ್ಟಿ ಮುಖ್ಯ ಅತಿಥಗಳಾಗಲಿದ್ದಾರೆ. ಇದೇ ಸಂದರ್ಭ ಮುಲ್ಕಿ ಬಂಟರ ಸಂಘ ಹಾಗೂ ಮೂಲ್ಕಿ ಸುಂದರರಾಮ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕೊಡಮಾಡುವ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿಯನ್ನು ಡಾ.ಎನ್.ನಾರಾಯಣ ಶೆಟ್ಟಿ ಸಿಮಂತೂರು ಇವರಿಗೆ ನೀಡಿ ಗೌರವಿಸಲಾಗುವುದು.
ಸಮಾಜ ಸೇವೆಗಾಗಿ ಮಂಗಳೂರಿನ ಶ್ರಿನಾಥ ಹೆಗ್ಡೆ,, ಸರಕಾರಿ ಸೇವೆಗಾಗಿ ಸರ್ಕಲ್ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ, ಕ್ರೀಡಾ ಸಾಧನೆಗಾಗಿ ಐಕಳ ದೇವೀಶ್ ಶೆಟ್ಟಿ,ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಶಮೀನಾ ಆಳ್ವ ರನ್ನು ಗೌರವಿಸಲಾಗುವುದಲ್ಲದೆ, ಮುಲ್ಕಿ ಬಂಟರ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಪ್ರತಿಭಾ ಪುರಸ್ಕಾರ,ಬಂಟ ಸಮಾಜದ ನೂತನ ಪಂಚಾಯತ್ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ. ಬೆಂಗಳೂರು ಬಂಟರ ಸಂಘ ನೀಡುವ ಹೊಲಿಗೆ ಯಂತ್ರ ವಿತರಣೆಯೂ ನಡೆಯಲಿದೆಯೆಂದು ಮುಲ್ಕಿ ಬಂಟರ ಸಂಘದ ಕಾರ್ಯದರ್ಶಿ ರವಿರಾಜ ಶೆಟ್ಟ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷ ಶರತ್ ಶೆಟ್ಟಿ ತಿಳಿಸಿದ್ದಾರೆ.
