ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ 32ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭವು ಉತ್ಸವ ಮಂಟಪದ ಸಾಂಸ್ಕøತಿಕ ವೇದಿಕೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಡಾ|ಭುಜಂಗ ಶೆಟ್ಟಿ ಕೊಡಿಯಾಲಾಗುತ್ತು ಫ್ಯಾಮಿಲಿ ಕ್ಲಿನಿಕ್ ವಾಮಂಜೂರು ಇವರು ವಹಿಸಿದ್ದರು. ವಿದ್ವಾನ್ ಶ್ರೀ ಕೃಷ್ಣರಾಜ ತಂತ್ರಿ ಕುಡುಪು ಇವರು “ಅಹಿಂಸೆಯೆ ಪರಮ ಧರ್ಮ, ಗಣಪ ಅದ್ಬುತ ಸಂಕೇತಗಳ ಸಾಕಾರ ಮೂಶಿಕ, ಗಣೇಶೋತ್ಸವದ ಆಚರಣೆಯೆಂದರೆ ಸಾಂಸ್ಕ್ರತಿಕತೆ, ಧಾರ್ಮಿಕತೆ, ತ್ಯಾಗಗಳ ಸಂಕೇತ ಎಂದು ಆಶೀರ್ವಚನ ನೀಡಿದರು.

ಪ್ರಧಾನ ಅತಿಥಿಗಳಾಗಿ ಶ್ರೀ ಜಿ.ಭಾಸ್ಕರ್‍ಭಟ್, ಮಂಗಳ ಎಲೆಕ್ಟ್ರಿಕಲ್ಸ್ ಗಂಜಿಮಠ, ಶ್ರೀ ಕೆ.ಹರೀಶ್ ನಾಯಕ್, ಪ್ರಬಂಧಕರು ಕೆನರಾ ಬ್ಯಾಂಕ್ ಕೈಕಂಬ, ಶ್ರೀಮತಿ ಲತಾ.ಕೆ.ಪ್ರಾಂಶುಪಾಲರು ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಸುಂಕದಕಟ್ಟೆ ಉಪಸ್ಥಿತರಿದ್ದರು.
ಪ್ರಧಾನ ಭಾಷಣಕಾರರು ಶ್ರೀ ತುಕರಾಮ ಪೂಜಾರಿ ಅಧ್ಯಕ್ಷರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇವರು ಸ್ವಾಮಿ ಗಣೇಶನ ಕುಟುಂಬವೆ ನಮಗೆ ಆದರ್ಶ, ಪ್ರಾಮಾಣಿಕತೆಯ ಬೆಳಕಿನಲ್ಲಿ ಬದುಕೋಣ, ಬದುಕು-ಬದುಕಲು ಬಿಡು ಎಂಬ ತತ್ವದಂತೆ ಬದುಕೋಣ, ಕೇವಲ ಆಚರಣೆಯಲ್ಲ ಪಾಲನೆ ಮುಖ್ಯ ಎಂದರು.
ಸಮಿತಿ ಅಧ್ಯಕ್ಷ ಶ್ರೀ ವಿನೋದ್‍ಮಾಡ ಸ್ವಾಗತಿಸಿ, ಕೋಶಾಧಿಕಾರಿ ಶ್ರೀ ಕೆ.ಶ್ರೀಧರ್‍ರಾವ್ ವಂದಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ್ ಮತ್ತು ಗಜಾನನಭಟ್ ಸಹಕರಿಸಿದರು.

