ಕೈಕಂಬ: ಬಂಗಾರ್ ಕಲಾವಿದೆರ್ ಗಂಜಿಮಠ ಇದರ ಉದ್ಘಾಟನಾ ಸಮಾರಂಭವು ಇಂದು ಸಂಜೆ ಕೈಕಂಬ ಶ್ರೀ ಗಣೇಶ್ ಕಟ್ಟೆಯ ಬಳಿ ನಡೆಯಲಿದೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಕೈಕಂಬ ಇದರ ಅಧ್ಯಕ್ಷರು ಶ್ರೀ ವಿನೋದ್ ಮಾಡ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಳಿಪಾಡಿಗುತ್ತು ಉದ್ಯಮಿ ಪ್ರಗತಿಪರ ಕೃಷಿಕರು ಶ್ರೀ ರಾಜೇಶ್ ನಾಯಕ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೈಕಂಬ ನೈಸ್ ಕ್ಯಾಟರರ್ಸ್‍ನ ಮಾಲಕರು ಶ್ರೀ ದೀಪಕ್ ಕೋಟ್ಯಾನ್, ಕೈಕಂಬ ಶ್ರೀನಿವಾಸ್ ಎಂಟರ್ ಪ್ರೈಸಸ್‍ನ ಮಾಲಕರು ಶ್ರೀ ಶ್ರೀಧರ್ ರಾವ್, ಗಂಜಿಮಠ ಸಾಯಿಕೃಪ ಹೋಟೆಲ್ ಮಾಲಕರು ಶ್ರೀ ರವಿ, ಗಂಜಿಮಠ ಶ್ರೀ ದುರ್ಗಾ ಹೋಟೆಲ್ ಮಾಲಕರು ಶ್ರೀ ಕರುಣಾಕರ ಕುಕ್ಕಟ್ಟೆ, ಗಂಜಿಮಠ ರಾಜಕೇಸರಿ ಯೂತ್ ಕ್ಲಬ್ ಅಧ್ಯಕ್ಷರು ಶ್ರೀ ಪ್ರವೀಣ್ ಎಡಪದವು, ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜ್ ಉಪನ್ಯಾಸಕರು ಶ್ರೀ ವಿಶ್ವನಾಥ ನೆಲ್ಯಾಡಿ ಉಪಸ್ಥಿತಲಿರುವರು.
ಸಂಜೆ 6ರಿಂದ 9ರವರೆಗೆ ಯಕ್ಷಕಲಾ ಸಂಘ ವರಕೋಡಿ ಇದರ ಬಾಲ ಕಲಾವಿದರಿಂದ ಯಕ್ಷಗಾನ ಬಯಲಾಟ ವೀರಮಣಿ-ಕುಶಲವ ,ರಾತ್ರಿ 9ರಿಂದ 12ರವರಗೆ ಬಂಗಾರ್ ಕಲಾವಿದೆರ್ ಗಂಜಿಮಠ ಇವರಿಂದ ನಮ ಎನ್ನಿಲೆಕ್ಕ ಅತ್ತ್ ಎಂಬ ತುಳು ಸಾಮಾಜಿಕ, ಹಾಸ್ಯಮಯ ನಾಟಕ ನಡೆಯಲಿದೆ.

By suddi9

Leave a Reply

Your email address will not be published. Required fields are marked *