ಮುಂಬಯಿ: ಮಹಾನಗರದಲ್ಲಿನ ಮಿಯಾಮಿ ಜಾಹೀರಾತು ವಿದ್ಯಾಲಯ (ಮಿಯಾಮಿ ಆ್ಯಡ್ ಸ್ಕೂಲ್ ಮುಂಬಯಿ) ಇದರ ಕು| ಸೊನಿಕಾ ಗಿಲ್ಬರ್ಟ್ ಬ್ಯಾಪ್ಠಿಸ್ಟ್ ವಿಶ್ವದ ಪ್ರತಿಷ್ಠಿತ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.
Sonica G.Baptist-C
ವಿದ್ಯಾಲಯದ ರುಷದ್ ಪಾಟೇಲ್ ಮತ್ತು ಹಿಮನಿಶ್ ಅಶಾರ್ ವಿದ್ಯಾರ್ಥಿಗಳನ್ನೊಳಗೊಂಡು ಸೊನಿಕಾ ಬ್ಯಾಪ್ಠಿಸ್ಟ್ ಇತ್ತೀಚಿಗೆ ನೇಪಾಳದಲ್ಲಿ ನಡೆದ ಭೂಕಂಪ ವೇಳೆಗೆ ಸಾವಿರಾರು ಜನರ ನೆರವಿಗೆ ತಮ್ಮ ವೈವಿಧ್ಯತೆಯ ಸೇವಾಪರ ಅನನ್ಯತಾ ಜಾಹೀರಾತುವೊಂದನ್ನು ರೂಪಿಸಿ ಹಲವಾರು ದಾನಿಗಳ ಸಹಯೋಗದಿಂದ ಜಾಹೀರಾತಿನ ಮೂಲಕ ಫೇಸ್‍ಬುಕ್, ಯೂಟ್ಯೂಬ್ ಇತ್ಯಾದಿ ಮಾಧ್ಯಮಗಳ ಮೂಲಕ ನೇಪಾಲದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯಕರಾಗಿದ್ದನ್ನು ಮನವರಿಸಿದ ಸಂಸ್ಥೆಈ ಪ್ರತಿಷ್ಠಿತಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ. ಅಲ್ಲಿನ ಜನತೆಯ ಜೀವನಕ್ಕೆ ಮರುಜೀವನ್ನೀ ಡುವಲ್ಲಿ ಶ್ರಮಿಸಿ ಸಾಧನಾತ್ಮಕ ಬದಲಾವಣಾ ಯೋಜನೆಗೆ ಪಾತ್ರರಾದ ಇವರ ಸೇವೆಯನ್ನು ಗುರುತಿಸಿ ವಿಶ್ವದ ಪ್ರತಿಷ್ಠಿತ ಕ್ಲಿಓ ತಮ್ಮ ಸಾಧನಾ ಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ. ಸೊನಿಕಾ ಬ್ಯಾಷ್ಠಿಸ್ಟ್ ಈ ಪ್ರೊಜೆಕ್ಟ್‍ನಲ್ಲಿ ಗ್ರಾಫಿಕ್ಸ್ ಆಗಿ ದುಡಿದಿದ್ದು, ಹಲವಾರು ಜನಪರ ಯೋಜನೆ, ಕಲ್ಪನೆಗಳನ್ನು ರೂಪಿಸಿ ಜಾಹೀರಾತನ್ನು ಸೃಷ್ಟಿಸಿರುತ್ತಾರೆ. ಹಗಲಿರುಳು ನಿದ್ದೆಯಿಲ್ಲದೆ ಈ ಯೋಜನೆಗಾಗಿ ಶ್ರಮಿಸಿದ ಪರಿಣಾಮವಾಗಿ ನಮ್ಮ ಈ ಗುರುತರ ಸೇವೆ ಮತ್ತು ಶ್ರಮ ಫಲಪ್ರದವಾಗಿದೆ. ಮುಂಬಯಿಯಿಂದ ನಾವೇ ಮೂವರು ಮಾತ್ರ ಪ್ರತಿನಿಧಿಸಿ ದ್ದು, ಸಮಾಜ ಹಿತಕ್ಕಾಗಿ ಅವರ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವಂತಹ ಉದ್ದೇಶವಿಸಿ ನಡೆಸಿದ ಕೆಲಸಕ್ಕಾಗಿ ಈ ಪುರಸ್ಕಾರ ಲಭಿಸಿದೆ ಎಂದು ಸೊನಿಕಾ ತಿಳಿಸಿದ್ದಾರೆ. ಮುಂಬಯಿಯಲ್ಲಿನಪ್ರತಿಷ್ಠಿತಗೃಹಪಯೋಗಿ ವಸ್ತುಗಳ ಹೆಸರಾಂತ ಸಂಸ್ಥೆ ಮಲಾೈಕಾ ಸಮೂಹದಆಡಳಿತ ನಿರ್ದೇಶಕ ಗಿಲ್ಬರ್ಟ್ ಬ್ಯಾಪ್ಠಿಸ್ಟ್‍ಮತ್ತು ಶ್ರೀಮತಿ ಮಾರ್ಸೆಲಿನ್ ಜಿ.ಬ್ಯಾಪ್ಠಿಸ್ಟ್‍ಸುಪುತ್ರಿಯಾಗಿದ್ದಾರೆ. ಸೊನಿಕಾ ಅವರು ಮಲಾೈಕಾ ಮತ್ತು ಯಶಿಕಾ ಅವರ ಮುದ್ದಿನ ಸಹೋದರಿ ಆಗಿರುವರು. ಗಿಲ್ಬರ್ಟ್ ಬ್ಯಾಪ್ಠಿಸ್ಟ್ ಮೂಲತಃ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು ನಿವಾಸಿ ಆಗಿದ್ದಾರೆ.

By suddi9

Leave a Reply

Your email address will not be published. Required fields are marked *