ಆಧುನಿಕ ರಂಗಭೂಮಿಯ ಅಸ್ತಿತ್ವ ಗಟ್ಟಿಗೊಳಿಸುವ ಅಗತ್ಯವಿದೆ
ಮುಂಬಯಿ: ರಂಗ ಭೂಮಿಯ ಅಸ್ತಿತ್ವವನ್ನು ಗಟ್ಟಿಗೊಳಿಸುವಲ್ಲಿ ಸಾಹಿತ್ಯ ಕೃತಿ ಮಹತ್ವದ ಪಾತ್ರ ವಹಿಸುತ್ತದೆ. ಆದರೂ ರಂಗ ಭೂಮಿ ದಿನದಿನಕ್ಕೆ ಕ್ಷೀಣಿಸುತ್ತಿರುವುದು ದುರದೃಷ್ಟ. ರಂಗ ಶಿಸ್ತು, ರಂಗ ಪರದೆ ನಮ್ಮಲ್ಲಿ ಇಂದು ಕಡಿಮೆಯಾಗುತ್ತಿರುವುದು ಜೊತೆಗೆ ನಾನು ಎಂಬುಂದು ನಮ್ಮಲ್ಲಿ ಒಳ ಹೊಕ್ಕಿರುವುದೇ ರಂಗಭೂಮಿಯ ಕ್ಷಿಣತೆಗೆ ಕಾರಣವಾಗಿದೆ. ರಂಗ ಭೂಮಿಗೆ ಇತರ ಸಾಹಿತ್ಯ ಕೃತಿಗಳು ಎಷ್ಟು ಮುಖ್ಯವೋ, ರಂಗಕೃತಿಗಳೂ ಅಷ್ಟೇ ಮುಖ್ಯವಾಗಿದೆ ಎಂದು ರಂಗನಟ ಮತ್ತು ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದರು. ಕರ್ನಾಟಕ ಸಂಘ ಮುಂಬಯಿ ಇದರ ಸಾಹಿತ್ಯ ಭಾರತಿಯು ಇಂದಿಲ್ಲಿಶನಿವಾರ ಮಾಹಿಮ್ ಪಶ್ಚಿಮದಲ್ಲಿನ ಸಂಘದ ಸಮರಸ ಭವನದಲ್ಲಿ ಆಯೋಜಿಸಿದ್ದ `ಸಾಹಿತ್ಯ ಚಿಂತನ-23′ ಕಾರ್ಯಕ್ರಮವನ್ನುದ್ದೇಶಿಸಿ ಚಿನ್ನಾ `ಸಾಹಿತ್ಯ ಕೃತಿ ಮತ್ತು ರಂಗ ಕೃತಿ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದ ಚಿನ್ನಾ ಅವರು ರಂಗ ಭೂಮಿ ಯಾಕೆ ಮೊದಲಿನ ಹಾಗೆ ಇಲ್ಲ ಮತ್ತುಎಪ್ಪತ್ತು ಎಂಬತ್ತರ ದಶಕದ ಚಾಲನೆಯನ್ನು ಯಾಕೆ ಇಂದು
ಉಳಿಸಿಕೊಂಡಿಲ್ಲ ಎಂದು ಖೇದ ಪಡಿಸಿದ ಚಿನ್ನಾ ಅವರು ಇತಿಹಾಸ ಪುರಾಣ ಕಾವ್ಯ, ಜಾನಪದ, ಕವನ, ಕಾದಂಬರಿ, ಹಾಸ್ಯ, ಸಣ್ಣ ಕಥೆ ಮುಂತಾದವುಗಳನ್ನು ರಂಗ ಭೂಮಿಯಲ್ಲಿ ಮರು ಮಾರ್ಪಾಡು ಗೊಳಿಸಿರುವ ಉದಾಹರಣೆಗಳೊಂದಿಗೆ ಚಿನ್ನಾ ವಿವರಿಸಿದರು. ಎಲ್ಲಿ ನಾನು ಇದೆಯೇ ಅಲ್ಲಿ ಕಳಕೊಳ್ಳುವುದುಕ್ಕೆ ಮೊದಲಾಗುತ್ತದೆ. ಮಾತ್ರವಲ್ಲದೇ ಸಹಕಾರ ಕೊರತೆಯು ಮುಖ್ಯ ಕಾರಣಗಳಲ್ಲಿ ಒಂದು ಎನ್ನಬಹುದು. ಮುಂದಿನ ತಲೆಮಾರನ್ನು ರಂಗಕರ್ಮಿಗಳಾದ ನಾವು ಸಿದ್ಧಪಡಿಸಿಲ್ಲ. ಹಣದ ಕೊರತೆಯೂ ಒಂದು ಕಾರಣ ಇರಬಹುದು.

ಈ ಎಲ್ಲಾ ಕಾರಣಗಳಿಂದ ಹವ್ಯಾಸಿ ತಂಡಗಳು ಕ್ಷೀಣಿಸುತ್ತದೆ. ಈಗ ಹವ್ಯಾಸಿ ಕಲಾವಿದರು ರಂಗಭೂಮಿ ಬಿಟ್ಟು ಟೆಕ್ನಾಲಜಿ ಮಿಡಿಯಾಕ್ಕೆ ಹೋಗುತ್ತಾರೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಗಾಯಕಿ ಡಾ| ಸಂಪದಾ ಭಟ್ ಮಾರ್ಬಳ್ಳಿ ಅವರು`ಭಾವಸಂಪದಾ’ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಮನೋಜ್ ರಾವ್ ಮತ್ತು ಎಸ್.ಅನಿಲ್ ಸಂಗೀತದಲ್ಲಿ ಸಹಯೋಗವನ್ನಿತ್ತರು.
ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್, ಗೌರವ ಕೋಶಾಧಿಕಾರಿ ಎಂ.ಡಿ ರಾವ್, ಮಾಜಿ ಅಧ್ಯಕ್ಷ ಮನೋಹರ್ ಎಂ.ಕೋರಿ, ಡಾ| ಎಸ್.ಕೆ ಭವಾನಿ ಮತ್ತು ನಾಡಿನ ಹೆಸರಾಂತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಉಪನ್ಯಾಸಕರಾಗಿದ್ದಕಾಸರಗೋಡು ಚಿನ್ನಾ ಮತ್ತು ಸಂಗೀತ ಕಾರ್ಯಕ್ರಮ ನೀಡಿದ ಡಾ|ಸಂಪದಾ ಭಟ್ ಅವರಿಗೆ ಶಾಲು ಹೊದೆಸಿ, ಸ್ಮರಣಿಕೆ, ಪುಷ್ಫಗುಪ್ಚ, ಕೃತಿಗಳನ್ನಿತ್ತು ಗೌರವಿಸಿದರು. ಈ ಬಗ್ಗೆ ನಡೆಸಲಾದ ಸಂವಾದ ಕಾರ್ಯಕ್ರಮದಲ್ಲಿ ರಂಗನಟ ಮೋಹನ್ ಮಾರ್ನಾಡ್, ಹೇಮಾ ಅಮೀನ್, ನ್ಯಾ| ವಸಂತ್ ಕಲಕೋಟಿ, ಕೊಲ್ಯ ರಾಜು ಶೆಟ್ಟಿ, ಮನೋಹರ್ ನಾಯಕ್, ಸಾ.ದಯಾ, ಕೆ.ವಿ ಐತಾಳ್, ಅನಿತಾ ಪೂಜಾರಿ ತಾಕೋಡೆ, ಎಸ್.ಟಿ ವಿಜಯಕುಮಾರ್ ತಿಂಗಳಾಯ,ಎಂ.ಡಿ ರಾವ್, ವಸಂತ್ ನಾಯಕ್, ರಾಜು ಶ್ರೀಯಾನ್, ಜೂಲಿತೇಟ್ ಪಿರೇರಾ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ದುರ್ಗಪ್ಪ ಕೋಟಿಯಾರ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಗೌರವ
ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್ ಅಭಾರ ಮನ್ನಿಸಿದರು.











