ಬಜಪೆ: ಪ್ರತಿಭೆಗಳನ್ನು ಅಳೆಯುವುದು ಕಷ್ಟ ಯುವ ಜನತೆ ತುಳು ಸಂಸ್ಕೃತಿಯ ಒಲವು ಹೊಂದಿರುವುದು ಸ್ತುತ್ಯಾರ್ಹ. ಶ್ರದ್ಧೆ, ನಿಷ್ಠೆ, ಛಲ ಇದ್ದರೆ ಅವಕಾಶಗಳನ್ನು ಯಶಸ್ವಿಯಾಗಿ ಪರಿವರ್ತಿಸಿಕೊಳ್ಳುವುದು ಸುಲಭ ಸಾಧ್ಯ. ಕುತೂಹಕ ಹಾಗೂ ಅನ್ವೇಷಕ ಗುಣದಿಂದ ಹೊಸ ಹೊಸ ಕತೆಗಳು ರೂಪ ಪಡೆಯುತ್ತವೆ. ಎಂದು ಕಲಾವಿದ, ನಿರ್ಮಾಪಕ-ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಹೇಳಿದರು.
ಅವರು ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಳದ ಸಭಾಗಣದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಮೋಕೆದ ಕಲಾವಿದೆರ್ ಸಂಯೋಜನೆಯ ಕಣ್ಣೀರ್ ತುಳು ಟೆಲಿಫಿಲ್‍ಮ್‍ನ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
18 vm sunkadakatte cd
ಕಣ್ಣೀರ್ ಟೆಲಿಫಿಲ್ನ್‍ನ ಕತೆ, ಸಂಭಾಷಣೆ-ನಿರ್ಮಾಣ-ನಿರ್ದೇಶನ ಯುವ ಕಲಾವಿದ ವಿನಯಕುಮಾರ್ ಅಧ್ಯಪಾಡಿ ಅವರದ್ದು ಭವಿತ್‍ರಾಜ್ ಪೊರ್ಕೋಡಿ ಅವರು ಟೆಲಿಫಿಲ್ಮ್‍ನ್ಸ್ ಭಾಯಾಗ್ರಹಣ ಮಾಡಿದ್ದು ಮುಖ್ಯಪಾತ್ರಗಳಲ್ಲಿ ಜೀವರಾಜ್ ಕೋಡಿಕೆರೆ, ಸುಶಾಂತ್ ಅವರಿದ್ದಾರೆ.
ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಅಧ್ಯಕ್ಷತೆ ವಹಿಸಿದ್ದರು. ಟ್ರ್ರಸ್ಟಿ ನಾರಾಯಣ ಪೂಜಾರಿ, ಚಿದಾನಂದ ಅದ್ಯಪಾಡಿ, ವಿಶಾಲ್ ಕೋಕಿಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *