ಬಂಟ್ವಾಳ: ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು 1.60 ಕೋಟಿ ವ್ಯವಹಾರ ನಡೆಸಿ 2014-15ರ ಅರ್ಥಿಕ ಸಾಲಿನಲ್ಲಿ 65.16ಲಕ್ಷ ಲಾಭಾಂಶವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ತಿಳಿಸಿದ್ದಾರೆ.
padmanabha kottary
ಬುಧವಾರ ಸಂಜೆ ಸಂಘದ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಲಾಭಾಂಶದಲ್ಲಿ ಸದಸ್ಯರಿಗೆ ಶೇಕಡಾ11ರಷ್ಟು ಡಿವಿಡೆಂಟನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗೋಳ್ತಮಜಲು, ಬಾಳ್ತಿಲ, ಅಮ್ಟೂರು, ವೀರಕಂಭ, ಬೋಳಂತ್ತೂರು ಈ ಐದು ಗ್ರಾಮಗಳನ್ನು ಒಳಗೊಂಡತ್ತೆ 2014ರ ಎಪ್ರಿಲ್ 4ರಂದು ಸ್ಥಾಪನೆಗೊಂಡ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದಲ್ಲಿ ಪ್ರಸ್ತುತ 2408 ಸದಸ್ಯರನ್ನು ಹೊಂದಿದೆ ಎಂದರು. ಸಂಘವು ಅರ್ಥ ಕೃಷಿಕಾರಿಗೆ ಬೆಲೆ ಸಾಲ, ಇನ್ನೀತರ ಸಾಲಗಳನ್ನು ನೀಡುತ್ತಿದ್ದು. ಪಡಿತರ ಕಾರ್ಡ್ ದಾರರಿಗೆ ಆಹಾರ ಸಾಮಾಗ್ರಿಗಳನ್ನು ಪೂರೈಸುತ್ತಿದೆ. ಆಗೆಯೇ ಕ್ಯಾಂಪ್ಕೋ ಸಂಸ್ಥೆಯ ಸಹಕಾರದಲ್ಲಿ ಅಡಿಕೆ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರದ 6ದಿನವೂ ಈ ಕೇಂದ್ರವೂ ಕಾರ್ಯಚರಿಸುತ್ತಿದೆ ಎಂದು ತಿಳಿಸಿದರು.

ಸರಕಾರದ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯೂ ಜಾರಿಯಲ್ಲದ್ದು ಸಂಘದ 1490 ರೈತ ಸದಸ್ಯರು ಈ ಯೋಜನೆಯಲ್ಲಿ ನೋಂದಯಿಸಿದ್ದಾರೆ. ಸದಸ್ಯರಿಗೆ ಅಪಘಾತ ವಿಮೆ ಸೇರಿದಂತೆ ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ದಿಯ ದೃಷ್ಟಿಯಿಂದ ವಾಹನ, ಗೃಹ ನಿಮರ್ಾಣ, ಹೈನುಗಾರಿಕೆಗೂ ಸಾಲ ನೀಡಲು ನಿರ್ಧರಿಸಲಾಗಿದೆ ಎಂದ ಅವರು ಸಂಘದ ರೈತ ಸದಸ್ಯರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯಾಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಯೋಜನೆ ಹಾಕಲಾಗಿದೆ. ಹಾಗೆಯೇ ಸಂಘಕ್ಕೆ ಸದಸ್ಯರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ವಿವರಿಸಿದರು. ಸುದ್ಧಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ್ ರೈ, ನಿದರ್ೇಶಕರಾದ ಗೋಪಾಲಕೃಷ್ಣ ಭಟ್, ಪೂವಪ್ಪ ಗೌಡ, ಜಯರಾಮ ರೈ, ಗಿರಿಯಪ್ಪ ಗೌಡ, ಕೊರಗಪ್ಪ ನಾಯ್ಕ, ಮೀನಾಕ್ಷಿ ಹಾಗೂ ಪ್ರಭಾರ ಮುಖ್ಯ ಕಾರ್ಯನಿವರ್ಾಹಣಾದಿಕಾರಿ ಸುರೇಶ್.ಕೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *